Kannada NewsKarnataka NewsLatest

ರಾಮದುರ್ಗ: ಹಾಡುಹಗಲೇ ನಡು ರಸ್ತೆಯಲ್ಲಿ ಹಣ ದೋಚಿದ ಚಾಲಾಕಿ ಕಳ್ಳ (ಸಿಸಿಟಿವಿ ವಿಡಿಯೋ ನೋಡಿ)

 

ಪ್ರಗತಿ ವಾಹಿನಿ ಸುದ್ದಿ ರಾಮದುರ್ಗ –

ಹಾಡಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೈಕಿನ ಬಾಕ್ಸ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂ. ಹಣವನ್ನು ಕಳ್ಳನೊಬ್ಬ ದೋಚಿ ಪರಾರಿಯಾದ ಘಟನೆ ರಾಮದುರ್ಗದಲ್ಲಿ ನಡೆದಿದೆ.

Home add -Advt

ರಾಮದುರ್ಗ ತಾಲೂಕಿನ ಗೊಣಗನೂರ ಗ್ರಾಮದ ಹಟೇಲಸಾಬ ಬುಡ್ಡೆಸಾಬ ಕರೋಲೆ ಅವರ ಹಣ ಕಳುವಾಗಿದೆ. ಹಟೇಲ ಸಾಬ ಅವರು ಕೆನರಾ ಬ್ಯಾಂಕಿನಿಂದ ಮೂರೂವರೆ ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಬಂದಿದ್ದರು. ರಾಮದುರ್ಗದಿಂದ ತಮ್ಮ ಊರಿಗೆ ತೆರಳುವ ಮಾರ್ಗ ಮಧ್ಯ ಬೇಕರಿಯೊಂದರ ಮುಂದೆ ಬೈಕ್ ನಿಲ್ಲಿಸಿ, ಹಣದ ಬ್ಯಾಗನ್ನು ಬೈಕಿನ ಬಾಕ್ಸ್‌ನಲ್ಲಿಟ್ಟು ಬೇಕರಿಗೆ ತೆರಳಿದ್ದರು. ಈ ವೇಳೆ ಕಳ್ಳ ಬೈಕಿನ ಬಾಕ್ಸ್‌ನಲ್ಲಿದ್ದ ಹಣದ ಚೀಲವನ್ನು ಎಗರಿಸಿದ್ದಾನೆ.

ಕಳ್ಳ ಕೆನರಾ ಬ್ಯಾಂಕ್ ಬಳಿಯಲ್ಲೇ ಹೊಂಚು ಹಾಕಿ ಕುಳಿತಿದ್ದು, ಬಳಿಕ ಹಟೇಲ್ ಸಾಬ್ ಅವರನ್ನು ಹಿಂಬಾಲಿಸಿ ಬಂದು ಹಣ ಕಳುವು ಮಾಡಿರುವ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಮದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಕನ್ನಡ ಹೋರಾಟಗಾರ ರಾಮ ವನ್ನೂರ ನಿಧನ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button