Latest

ಪೆಟ್ರೋಲ್-ಡೀಸೆಲ್ ದರದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೆಟ್ರೋಲ್-ಡೀಸೆಲ್ ದರ ಏರಿಕೆ ಇಂದೂ ಕೂಡ ಮುಂದುವರೆದಿದ್ದು, 31 ಪೈಸೆ ಹೆಚ್ಚಳವಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 100 ರೂ ಆಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಶೀಘ್ರದಲ್ಲಿಯೇ ಪೆಟ್ರೋಲ್ ಬೆಲೆ ಶತಕ ಬಾರಿಸುವ ಆತಂಕ ಎದುರಾಗಿದೆ. ಇಂದು ಪೆಟ್ರೋಲ್ ದರ ಲೀಟರ್ ಗೆ 92.37 ರೂ ಆಗಿದ್ದರೆ, ಡೀಸೆಲ್ ದರ ಲೀಟರ್ ಗೆ 85.74 ರೂ ಆಗಿದೆ.

Home add -Advt

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 90.19 ಹಾಗೂ ಡೀಸೆಲ್ ದರ 80.60 ರೂ ಆಗಿದೆ. ಮುಂಬೈನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ದರ 35 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಲೀಟರ್ ಗೆ 87.67 ರೂ ಹಾಗೂ ಪೆಟ್ರೋಲ್ ಲೀಟರ್ ಗೆ 96.62 ರೂ ಆಗಿದೆ.

Related Articles

Back to top button