Kannada NewsKarnataka News

ನಾಳೆ ಜಿಐಟಿಯಲ್ಲಿ ತೃತೀಯ ಪದವಿ ಪ್ರದಾನ ಸಮಾರಂಭ

 ಜಿಐಟಿಯಲ್ಲಿ ತೃತೀಯ ಪದವಿ ಪ್ರದಾನ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ.ಐ.ಟಿ) ಯು ಸ್ವಾಯತ್ತ ಪಠ್ಯಕ್ರಮದ “ತೃತೀಯ ಪದವಿ ಪ್ರದಾನ ಸಮಾರಂಭ”  ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ, ಕಾಲೇಜಿನ ಮೈದಾನದಲ್ಲಿ ಹಾಕಿದ ಭವ್ಯ ಮಂಟಪದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ  ಪ್ರಲ್ಹಾದ್ ಜೋಶಿ ಹಾಗೂ ಕೇಂದ್ರ ಸರ್ಕಾರದ ರೇಲ್ವೆ ಖಾತೆಯ ರಾಜ್ಯ ಸಚಿವ  ಸುರೇಶ ಅಂಗಡಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರತಿಷ್ಠಿತ ಸಾಫ್ಟ್ ವೆರ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿ ಸಿ ಎಸ್)ನ ಗ್ಲೋಬಲ್ ಆರ್.ಎಂ.ಜಿ ಮುಖ್ಯಸ್ಥ  ಚಕ್ರವರ್ತಿ ಇ ಎಸ್ ಅವರು ಪದವಿ ಪ್ರಧಾನ ಸಮಾರಂಭದ ಮುಖ್ಯ ಭಾಷಣವನ್ನು ಮಾಡಲಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದಪ್ಪ ಹಾಗೂ ಕುಲಸಚಿವ ಪ್ರೊ. ಎ. ಎಸ್. ದೇಶಪಾಂಡೆ ಗೌರವ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ.
ಕರ್ನಾಟಕ ಕಾನೂನು ಸಂಸ್ಥೆ ಅಧ್ಯಕ್ಷ ಅನಂತ್ ಮಂಡಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕೆಎಲ್‌ಎಸ್ ಚೇರ್ಮನ್ ಎಮ್. ಆರ್. ಕುಲಕರ್ಣಿ, ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ್ ,  ಬೆಳಗಾವಿ ಮತ್ತು ಅಕಾಡೆಮಿಕ್ ಕೌನ್ಸಿಲ್ ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಗೌರವ ಅತಿಥಿಗಳಾಗಿರುತ್ತಾರೆ.
ಇದು ಸ್ವಾಯತ್ತ ಪಠ್ಯಕ್ರಮದ ನಾಲ್ಕು ವರ್ಷದ ಬಿ ಇ ಪದವಿಯ ಪ್ರಥಮ ಪದವಿ ಸಮಾರಂಭವಾಗಿದ್ದು, ಸ್ನಾತಕೋತ್ತರ ಕೋರ್ಸ್ ಗಳನ್ನೂ ಪರಿಗಣಿಸಿದರೆ ಇದು ಮೂರನೆಯ ಪದವಿ ಪ್ರದಾನ ಸಮಾರಂಭವಾಗಿದೆ.

ಇದರಲ್ಲಿ ನಾಲ್ಕು ವರ್ಷದ ಬಿ ಇ ಪದವಿ ಮುಗಿಸಿದ ಸುಮಾರು ೯೦೦ ಪದವೀದರರಿಗೆ ಹಾಗೂ ಎರಡು ವರ್ಷದ ಸ್ನಾತಕೋತ್ತರ ಅಧ್ಯಯನ ಮುಗಿಸಿದ ಎಂ.ಬಿ.ಎ, ಎಂ.ಸಿ.ಎ ಮತ್ತು ಮಾಸ್ಟರ್ ಇನ್ ಟೆಕ್ನಾಲಜಿ (ಎಂ.ಟೆಕ್.) ಗಳ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button