ಹೋದಲೆಲ್ಲ ತನ್ನ ಖಾಸಗಿ ಶೌಚಾಲಯವನ್ನೂ ಕೊಂಡೊಯ್ಯುತ್ತಾನೆ ಈ ದೇಶದ ಅಧ್ಯಕ್ಷ, ಶೌಚಾಲಯಕ್ಕೂ ಕಾವಲುಗಾರರಿದ್ದಾರೆ. ಬೇರೆಯವರು ಬಳಸಿದರೆ ಮರಣದಂಡನೆ !

ಉತ್ತರ ಕೋರಿಯಾ – ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಉನ್ ನಾನಾ ಕಾರಣಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಕ್ರೌರ್ಯ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಉತ್ತರ ಕೋರಿಯಾವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಕಿಮ್ ೨೦೨೦ರ ಫೆಬ್ರವರಿ ಸುಮಾರಿಗೆ ತಿಂಗಳಾನುಗಟ್ಟಲೆ ನಾಪತ್ತೆಯಾಗಿಯೂ ಸುದ್ದಿಯಾಗಿದ್ದರು.

ಬಳಿಕ ತಮ್ಮ ತಂದೆ ಮೃತಪಟ್ಟ ಕಾರಣಕ್ಕೆ ೧೦ ದಿನಗಳ ಕಾಲ ಉತ್ತರ ಕೊರಿಯಾದ ಯಾರೊಬ್ಬರೂ ನಗುವಂತಿಲ್ಲ, ನಕ್ಕರೆ ತಲೆ ತೆಗೆಯಲಾಗುವುದು ಎಂಬ ಆದೇಶ ಹೊರಡಿಸಿದ್ದರು. ಈ ರೀತಿ ವಿಕ್ಷಿಪ್ತ ವ್ಯಕ್ತಿತ್ವದ ಕಿಮ್ ಈಗ ತಮ್ಮ ಶೌಚಾಲಯದ ವಿಚಾರದಲ್ಲೂ ಸುದ್ದಿಯಾಗಿದ್ದಾರೆ.

Home add -Advt

ಹೌದು, ಕಿಮ್ ಜೋಂಗ್ ಉನ್ ವಿಶ್ವದ ಯಾವುದೇ ಮೂಲೆಗೆ ಹೋದರೂ ತಮ್ಮದೇ ಆದ ಖಾಸಗಿ ಶೌಚಾಲಯವೊಂದನ್ನು ಕೊಂಡೊಯ್ಯುತ್ತಾರಂತೆ. ಅವರು ಬೇರೆ ಯಾವುದೇ ಶೌಚಾಲಯವನ್ನು ಬಳಸುವುದಿಲ್ಲ ಎಂಬ ಮಾಹಿತಿಯನ್ನು ಬಹುಕಾಲ ಅವರ ಅಂಗರಕ್ಷಕ ಪಡೆಯಲಿದ್ದ ವ್ಯಕ್ತಿಯೊಬ್ಬ ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ್ದು ವರದಿಯಾಗಿದೆ.

ಕಾರಣವೇನು ?

ಕಿಮ್ ಜೋಂಗ್ ಉನ್ ಹೀಗೆ ಹೋದಲೆಲ್ಲಾ ತಮ್ಮದೇ ಆದ ಶೌಚಾಲಯ ಹೊತ್ತಯ್ಯಲು ಕಾರಣವೂ ವಿಚಿತ್ರವಾಗಿದೆ. ಕಿಮ್ ತಮ್ಮ ಆರೋಗ್ಯದ ಸ್ಥಿತಿಗತಿಯನ್ನು ಗುಟ್ಟಾಗಿ ಇಡಲು ಬಯಸುತ್ತಾರೆ. ಶತ್ರುಗಳು ತಮ್ಮ ಮಲದಿಂದ ಆರೋಗ್ಯದ ಸ್ಥಿತಿಗತಿಯನ್ನು ಪತ್ತೆಹಚ್ಚುವ ಸಾಧ್ಯತೆ ಇದೆ. ಹಾಗಾಗಿ ಬೇರೆಯವರು ತಮ್ಮ ಮಲವನ್ನು ಸಂಗ್ರಹಿಸಲು ಸಾಧ್ಯವಾಗದಂತೆ ನೋಡಿಕೊಳ್ಳಲು ಕಿಮ್ ತಮ್ಮದೇ ಆದ ಪ್ರತ್ಯೇಕ ಶೌಚಾಲಯವನ್ನು ಎಲ್ಲೆಡೆ ಹೊತ್ತೊಯ್ಯುತ್ತಾರಂತೆ.

ಶೌಚಾಲಯದ ಕಾವಲಿಗೂ ಜನರಿದ್ದಾರೆ

ಇನ್ನು ಕಿಮ್‌ರ ಈ ಖಾಸಗಿ ಶೌಚಾಲಯವನ್ನು ಬೇರೆ ಯಾರೂ ಅಪ್ಪಿತಪ್ಪಿಯೂ ಬಳಸುವಂತಿಲ್ಲ. ಒಂದೊಮ್ಮೆ ಕಿಮ್ ಹೊರತುಪಡಿಸಿ ಬೇರೆ ಯಾರಾದರೂ ಬಳಸಿದ್ದು ಕಂಡರೆ ಅವರಿಗೆ ಮರಣದಂಡನೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಕಿಮ್ ರ ಶೌಚಾಲಯವನ್ನು ಕಾಯಲಿಕ್ಕೂ ಸೈನಿಕರಿದ್ದಾರೆ ಎಂದು ವಾಶಿಂಗ್ಟನ್ ಪೋಸ್ಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆ ಭಾಗವನ್ನು ಆಕರ್ಷಣೀಯವಾಗಿಸಲು ಹೋಗಿ ಪೇಚಿಗೆ ಸಿಲುಕಿದ ನಟಿ

Related Articles

Back to top button