ಆ ಭಾಗವನ್ನು ಆಕರ್ಷಣೀಯವಾಗಿಸಲು ಹೋಗಿ ಪೇಚಿಗೆ ಸಿಲುಕಿದ ನಟಿ

ನಿಮ್ಮ ಸಮಯವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ, ಇಂತದ್ದೆನ್ನೆಲ್ಲ ಮಾಡಿ ವ್ಯರ್ಥವಾಗಿಸಿಕೊಳ್ಳಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

 

Home add -Advt

ನ್ಯೂಯಾರ್ಕ್ –  ಹಿಂಭಾಗವನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಫೋಟೊಶಾಪ್‌ನಲ್ಲಿ ಎಡಿಟ್ ಮಾಡಿಕೊಂಡ ಟಿವಿ ರಿಯಾಲಿಟಿ ಶೋನ ನಟಿಯೊಬ್ಬಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಖ್ಯಾತ ಟಿವಿ ರಿಯಾಲಿಟಿ ಶೋ ಸ್ಟಾರ್ ಆಗಿರುವ ಕರ್ಟ್ನಿ ಕರ್ದಾಶಿಯಾನ್  (kourtney kardashiyan) ಇಂಥಹ ಯಡವಟ್ಟು ಮಾಡಿಕೊಂಡವರು.

42 ವರ್ಷದ ಈ ರಿಯಾಲಿಟಿ ಶೋ ಸ್ಟಾರ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಅವರು ಇನ್ಸ್ಟಾಗ್ರಾಂನಲ್ಲಿ ಚಿರತೆ ಬಣ್ಣದ ಡ್ರೆಸ್ ಹಾಕಿಕೊಂಡಿರುವ ತಮ್ಮ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದರು. ಮೊಬೈಲ್ ಕೈಯ್ಯಲ್ಲಿ ಹಿಡಿದುಕೊಂಡು ತಿರುಗಿ ನೋಡುತ್ತಿರುವ ಈ ಫೋಟೊದಲ್ಲಿ ಅವರ ಹಿಂಭಾಗ ದೊಡ್ಡದಾಗಿ ಕಾಣುತ್ತಿದೆ. ನಟಿ ತಮ್ಮ ಹಿಂಭಾಗವನ್ನು ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡಲು ಈ ರೀತಿ ಫೋಟೊ ಎಡಿಟ್ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಓರ್ವ ಅಭಿಮಾನಿ, ಇದು ನಿಮಗೆ ಶೋಭೆ ತರುವುದಿಲ್ಲ ಎಂದು ಮೆಸೇಜ್ ಮಾಡಿದ್ದರೆ ಇನ್ನೊಬ್ಬರು, ಓ ದೇವರೆ ಹೀಗೇಕೆ ? ಎಂದು ಉದ್ಗರಿಸಿದ್ದಾರೆ. ಮತ್ತೊಬ್ಬರು ಈ ಫೋಟೊ ಮುಜುಗರ ತರುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ.

ನಿಮ್ಮ ಸಮಯವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ, ಇಂತದ್ದೆನ್ನೆಲ್ಲ ಮಾಡಿ ವ್ಯರ್ಥವಾಗಿಸಿಕೊಳ್ಳಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಅಭಿಮಾನಿಗಳ ನಿರಂತರ ಟೀಕೆಯ ಬಳಿಕ ಕರ್ಟ್ನಿ ತಮ್ಮ ಫೋಟೊವನ್ನು ಇನ್ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ.

ರವಿಶರಣ್ ಭಟ್ ಅಪಹರಣ ಪ್ರಕರಣ: ಬೆಳಗಾವಿಯ 8 ಜನರ ಬಂಧನ; ಪ್ರಮುಖ ಆರೋಪಿಗಳಿಗಾಗಿ ಶೋಧ; ಕ್ರಿಫ್ಟೋ ಕರೆನ್ಸಿ ದಂಧೆ ಕಾರಣವೇ?

Related Articles

Back to top button