Kannada NewsLatestNational

*ವಿಮಾನ ಪತನದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಹಾನಿಯಾಗದ ರೀತಿಯಲ್ಲಿ ಪತ್ತೆಯಾದ ಅದೊಂದು ವಸ್ತು!*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 246 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ವಿಮಾನ ಅಪಘಾತಗಳ ಪ್ರಕರಣದಲ್ಲೇ ಅತ್ಯಂತ ದೊಡ್ಡ ದುರಂತ ಎನ್ನಲಾಗಿದೆ.

ವಿಮಾನ ಪತನಗೊಂಡು ಕಟ್ಟಡಗಳಿಗೆ ಅಪ್ಪಳಿಸಿ ಹೊತ್ತಿ ಉರಿದಿದ್ದು, ವಿಮಾನ ಹಾಗೂ ಪ್ರಯಾಣಿಕರು ಸಂಪೂರ್ಣ ಸುಟ್ಟು ಕರಕಲಾಗಿದ್ದರೂ ಅಚ್ಚರಿ ರೀತಿಯಲ್ಲಿ ಪುಸ್ತಕವೊಂದು ಏನೂ ಆಗದ ರೀತಿಯಲ್ಲಿ ಪತ್ತೆಯಾಗಿದೆ.

Home add -Advt

ವಿಮಾನ ದುರಂತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿರುವ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಈ ನಡುವೆ ಭಗವದ್ಗೀತೆಯ ಪುಸ್ತಕ ಮಾತ್ರ ಯಾವುದೇ ಹಾನಿಯಾಗದ ರೀತಿಯಲ್ಲಿ ಲಭ್ಯವಾಗಿದೆ.

ವಿಮಾನ ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯ ಪುಸ್ತಕವೊಂದು ಪತ್ತೆಯಾಗಿದ್ದು, ಪುಸ್ತಕಕ್ಕೆ ಸ್ವಲ್ಪವೂ ಏನೂ ಆಗಿಲ್ಲ. ಇಡೀ ಪುಸ್ತಕ ಮಾತ್ರ ಹಾನಿಯಾಗದ ರೀತಿಯಲ್ಲಿ ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಮಾನ ಪತನವಾದ ಸ್ಥಳದಲ್ಲಿ ಸಿಕ್ಕ ಭಗವದ್ಗೀತೆ ಎಂದು ಹೇಳಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Related Articles

Back to top button