Cancer Hospital 2
Beereshwara 36
LaxmiTai 5

ಸಂವಿಧಾನ ಉಳಿಸಲು ಇದು ನಮ್ಮ ಮೊದಲ ಹೆಜ್ಜೆ: ರಾಹುಲ್ ಗಾಂಧಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಈ ಚುನಾವಣೆ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಹೆಜ್ಜೆಯಾಗಿದೆ. ಮೋದಿ ಸರ್ಕಾರ ಎಲ್ಲಾ ಸಂಸ್ಥೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಲೋಕಸಭಾ ಚುನಾವಣೆಯು ಅದರ ವಿರುದ್ಧ ಹೋರಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ರಾಜಕೀಯ ಕಾರಣಕ್ಕೆ ನಾವು ಹೋರಾಟ ಮಾಡಲಿಲ್ಲ. ಹಿಂದೂಸ್ತಾನದ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ನಾವು ಹೋರಾಡಿದೆವು. ಮೋದಿ, ಅಮಿತ್ ಶಾ ಇದೆಲ್ಲವನ್ನೂ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ನಮ್ಮನ್ನು ಹೆದರಿಸಿದರು, ದಬ್ಬಾಳಿಕೆ ಮಾಡಿದರು, ದೌರ್ಜನ್ಯ ಮಾಡಿದರು. ನಾವು ಸಂವಿಧಾನ ಉಳಿಸಲು ಹೋರಾಡಬೇಕಿತ್ತು ಎಂದರು.‌

Emergency Service

ನಿತೀಶ್ ಕುಮಾರ್ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ನಮ್ಮ ಮೈತ್ರಿ ಪಕ್ಷಗಳನ್ನು ನಾವು ಗೌರವಿಸುತ್ತೇವೆ. ಅವರೊಂದಿಗೆ ಮಾತನಾಡದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾಳೆ ಇಂಡಿಯ ಬ್ಲಾಕ್ ನಾಯಕರ ಸಭೆ ನಡೆಯಲಿದ್ದು, ಎಲ್ಲರೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Bottom Add3
Bottom Ad 2