Cancer Hospital 2
Beereshwara 33
LaxmiTai 5

ನನ್ನ ಗೆಲುವನ್ನು ಚಿಕ್ಕೋಡಿ ಜನತೆಗೆ ಸಮರ್ಪಿಸುತ್ತೇನೆ: ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ, ಗೋಕಾಕ: 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ನನ್ನ ಗೆಲುವಿಗೆ ಸಹಕರಿಸಿದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳು. ನಾನು ನಿಮ್ಮ ನಿರೀಕ್ಷೆ ಮೀರಿ ಜನಪರ ಕೆಲಸ ಮಾಡುವ ಮೂಲಕ ಚಿಕ್ಕೋಡಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಗೆಲುವು ಚಿಕ್ಕೋಡಿ ಲೋಕಸಭೆ ಜನತೆಗೆ ಸಮರ್ಪಣೆ ಮಾಡುತ್ತೇನೆ. ಚಿಕ್ಕೋಡಿ ಕ್ಷೇತ್ರದ ಎಲ್ಲ ಮತದಾರ ಬಾಂಧವರು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು, ಮುಖಂಡರು, ಪಕ್ಷದ ಎಲ್ಲಾ ಹಿರಿಯ, ಕಿರಿಯ ನಾಯಕರು, ಶಾಸಕರ ಶ್ರಮದಿಂದ ಇಂದು ನಾನು ಅಭೂತಪೂರ್ವ ಗೆಲುವು ಸಾಧಿಸಿದ್ದೇನೆ. ಅವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆಂದರು.

Emergency Service

ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ತಂದೆ, ಸಚಿವ ಸತೀಶ್‌ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

Bottom Add3
Bottom Ad 2