Belagavi NewsBelgaum NewsPolitics

*ದಲಿತ ನಾಯಕರ ಭೇಟಿ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು*

ಪ್ರಗತಿವಾಹಿನಿ ಸುದ್ದಿ : ಮುಡಾ ಹಗರಣದಿಂದ ಕಂಗೆಟ್ಟಿರುವ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್‌ನೊಳಗೆಯೇ ತೀವ್ರ ಪ್ರಯತ್ನ ನಡೆಯುತ್ತಿದ್ದು, ಇನ್ನೊಂದೆಡೆ ದಲಿತ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಇದೀಗ ಈ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಇರುವುದರಿಂದ ಅಲ್ಲಿಗೆ ಭೇಟಿ ನೀಡಿದ್ದೇವೆ ಅಷ್ಟೇ. ನಾವೆಲ್ಲ ಒಂದೇ ಪಕ್ಷದವರು ಆಗಿರುವುದರಿಂದ ಮೇಲಿಂದ ಮೇಲೆ ಭೇಟಿಯಾಗುತ್ತಲೆ ಇರುತ್ತೇವೆ ಇದರಲ್ಲಿ ಯಾವುದೇ ರೀತಿಯ ಊಹಾಪೋಹಗಳ ಅವಶ್ಯಕತೆ ಇಲ್ಲ ಎಂದರು.

Home add -Advt

ಅದರಲ್ಲೂ ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಮಹದೇವಪ್ಪ ನಾನು ಜಸ್ಟ್ ಡಿನ್ನ‌ರ್ ಮಾಡಿದ್ದೇವೆ ಅಷ್ಟೇ. ಮಹದೇವಪ್ಪನ ಮನೆ ನನ್ನ ಮನೆ ಅಕ್ಕಪಕ್ಕದಲ್ಲಿ ಇರೋದರಿಂದ ನಾವು ಆಗಾಗ ಮೇಲೆ ಭೇಟಿ ಆಗುತ್ತಲ್ಲೇ ಇರುತ್ತೇವೆ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

Related Articles

Back to top button