Latest

ಧಾರವಾಡದಲ್ಲಿ ಒಂದಾದ ಹಿಜಾಬ್- ಕೇಸರಿ ಶಾಲು; ಪಾಸಿಟಿವ್ ಡೆವಲಪ್ ಮೆಂಟ್

ಹಿಜಾಬ್- ಕೇಸರಿ ವಿವಾದಕ್ಕಿಂತ ಶಿಕ್ಷಣವೇ ಮುಖ್ಯ ಎಂದು ಒಗ್ಗಟ್ಟು ಪ್ರದರ್ಶಿಸಿದ ವಿದ್ಯಾರ್ಥಿಗಳು

ಪ್ರಗತಿ ವಾಹಿನಿ ಸುದ್ದಿ ಧಾರವಾಡ – ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಕೇಸರಿ ಶಾಲು ಗಲಾಟೆಯಲ್ಲಿ ಮುಳುಗಿದ್ದರೆ ಧಾರವಾಡದ ವಿದ್ಯಾರ್ಥಿಗಳು ಈ ಗದ್ದಲದಿಂದ ದೂರವಿದ್ದು ತಮಗೆ ಶಿಕ್ಷಣವೇ ಮುಖ್ಯ ಎಂಬ ಸಂದೇಶ ಸಾರಿದ್ದಾರೆ.

ಧಾರವಾಡದ ಶೈಕ್ಷಣಿಕ ಕಾಶಿ ಎಂದೇ ಹೆಸರಾಗಿದೆ. ಇಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಕಲಿಯಲು ಬಂದ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಆದರೆ ಇಲ್ಲಿನ ಬಹತೇಕ ವಿದ್ಯಾರ್ಥಿಗಳು ಹಿಜಾಬ್- ಕೇಸರಿ ಶಾಲು ವಿವಾದದಿಂದ ದೂರವೇ ಉಳಿದಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಅಧೀಕೃತವಾಗಿ ಸಭೆ ಸೇರಿ ವಿವಾದದಿಂದ ದೂರ ಉಳಿಯಲು ನಿರ್ಧರಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಇಲ್ಲಿನ ಕರ್ನಾಟಕ ಕಾಲೇಜಿನ ಆವಾರದಲ್ಲಿ ಎನ್‌ಎಸ್‌ಯುಐ ಮತ್ತು ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ಸಭೆ ಸೇರಿ ನಾವೆಲ್ಲ ಒಂದು ಎಂಬ ಘೋಷಣೆ ಕೂಗಿದರು.

ಇಂಥಹ ವಿವಾಧಗಳಿಂದ ದೂರವಿದ್ದು ಶಿಕ್ಷಣದ ಬಗ್ಗೆ ಒತ್ತುಕೊಡೋಣ ಎಂದು ನಿರ್ಣಯಿಸಿದರು. ವಿದ್ಯಾರ್ಥಿ ಪ್ರಮುಖರಾದ ಅರುಣ ಅಮರಗೊಳ, ಕಾಶಿನಾ ಮನ್ನೂರಿ, ಎಂ. ಕೆ. ನಿಪ್ಪಾಣಿ, ಫಹದ್ ಮುಲ್ಲಾ, ವಿದ್ಯಾನಂದ, ವೆಂಕಟೇಶ ಲಮಾಣಿ, ಉಲ್ಲಾಸ್, ಮನೋಹರ ಮತ್ತಿತರರು ಪಾಲ್ಗೊಂಡಿದ್ದರು.

Home add -Advt

ಬಹು ನಿರೀಕ್ಷಿತ ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button