*ಹಣದ ಹೊಳೆ ಹರಿಸುತ್ತಿರುವರಿಗೆ ಪಾಠ ಕಲಿಸಬೇಕು: ಅಶೋಕ ಪಟ್ಟಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿರುವರಿಗೆ ಪಾಠ ಕಲಿಸಲು ಮಲ್ಲಣ ಯಾದವಾಡ ಅವರಿಗೆ ನಾವು ಬೆಂಬಲ ನೀಡಿದ್ದೇವೆ ಎಂದು ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರು, ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಲ್ಲಣ ಯಾದವಾಡ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಬಹುದು. ಡಿಸಿಸಿ ಬ್ಯಾಂಕ್ ಚುನಾವಣೆಗೂ ವಿಧಾನ ಸಭಾ ಚುನಾವಣೆಗೂ ಸಂಬಂಧ ಇಲ್ಲ. ಇದರಲ್ಲಿ ಶತ್ರುಗಳು ಎಂಬುವ ಪ್ರಶ್ನೆ ಬರುವುದಿಲ್ಲ ಎಂದರು.
ರಾಮದುರ್ಗ ತಾಲೂಕಿನ ರೈತ, ಮುಖಂಡರ ಅಪೇಕ್ಷೆಯಂತೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಣ ಯಾದವಾಡ ಅವರಿಗೆ ಬೆಂಬಲ ಸೂಚಿಸಿದ್ದೇವೆ. ನಾವು ಯಾರ ಬಣವು ಅಲ್ಲ ನಮ್ಮದು ತಟಸ್ಥ ಬಣ. ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನಾನು ಹೇಳಿದ್ದೆ, ದವಣ ಅವರು ನಾಲ್ಕು ಬಾರಿ ನಿರ್ದೇಶಕರು ಆಗಿದ್ದಾರೆ. ಈ ಬಾರಿ ಬೇರೆ ಅಭ್ಯರ್ಥಿ ಹಾಕಿ ಅವಿರೋಧ ಮಾಡೋಣ ಎಂದಿದೆ. ಆದರೆ ಅದು ಆಗಲಿಲ್ಲ ಎಂದರು.