ಜಾಮೀನಿನ ಮೇಲೆ ಹೊರಬಂದವರು ಮತ್ತೆ ಎಮ್ಮೆ ಕದ್ದಿದ್ದರು!
ಪ್ರಗತಿವಾಹಿನಿ ಸುದ್ದಿ, ಅಗಸಗಿ :
ಅಂಬೇವಾಡಿ ಗ್ರಾಮದಲ್ಲಿ ಕಳೆದ 4 ತಿಂಗಳ ಹಿಂದೆ 3 ಎಮ್ಮೆಗಳ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಭಾನುವಾರ ಇಬ್ಬರು ಆರೋಪಿಗಳನ್ನು ಕಾಕತಿ ಪೋಲಿಸರು ಬಂಧಿಸಿದ್ದಾರೆ.
ಈ ಠಾಣೆ ವ್ಯಾಪ್ತಿಯಲ್ಲಿ ಎಮ್ಮೆ ಕಳ್ಳತನಕ್ಕೆ ಸಂಭಂದಿಸಿದಂತೆ ಇದು ಎರಡನೇ ಪ್ರಕರಣವಾಗಿದ್ದು, ಈ ಹಿಂದೆ ಇದೇ ಆರೋಪಿಗಳು ಅಗಸಗಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಎಮ್ಮೆಗಳನ್ನು ಕದ್ದು ಜೈಲು ಸೇರಿದ್ದರು. ಕೆಲ ದಿನಗಳ ನಂತರ ಜಾಮೀನ ಮೇಲೆ ಹೊರಬಂದ ಆರೋಪಿಸಿಗಳು ಮತ್ತದೆ ಕಸುಬಿಗೆ ಕೈ ಹಾಕಿದ್ದರೆನ್ನಲಾಗಿದೆ.
ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಕಾಕತಿ ಪೋಲಿಸರು ಆರೋಪಿಗಳ ಜಾಲ ಬೆನ್ನತ್ತಿದಾಗ ಸಾಕ್ಷಿ ಸಮೇತ ಸಿಕ್ಕಾಕಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಮಣ್ಣಿಕೇರಿ ಗ್ರಾಮದ ಶೇಟ್ಟು ರಾಮಾ ಸನದಿ (24) ಹಾಗೂ ಕೇದನೂರ ಗ್ರಾಮದ ಅನಿಲ ರಾಜು ಗುಡಗೆನಹಟ್ಟಿ (28) ಬಂಧಿತರು.
ಈ ಹಿಂದೆ ನಡೆದ ಅಗಸಗಿ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಅನಿಲ ಗುಡಗೆನಟ್ಟಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಲ್ಲದೆ ತನ್ನ ಸಹಚರರಿಗೂ ಜಾಮೀನು ಕೊಡಿಸಿ ಹೊರ ತರುವಲ್ಲಿ ಯಶಸ್ವಿಯಾಗಿದ್ದ. ಜಾಮೀನು ಪಡೆದುಕೊಂಡು ಹೊರಬಂದ ಆರೋಪಿಗಳು ರಾಜಾರೋಷವಾಗಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
ಇದನ್ನರಿತ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಮಾರ್ಗದರ್ಶನದಲ್ಲಿ ಮುಖ್ಯ ಪೇದೆಗಳಾದ ಅಡಿವೇಪ್ಪಾ ಕುಂಡೆದ, ನಾಗನ್ನವರ ಸೇರಿದಂತೆ ಇನ್ನಿತರ ಸಿಬ್ಬಂದಿ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ