Belagavi NewsBelgaum NewsKannada NewsKarnataka NewsLatest

ಮೂವರು ನಾಪತ್ತೆ

೫೪ ವರ್ಷ ವಯಸ್ಸಿನ ವ್ಯಕ್ತಿ ನಾಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ಕೆ.ಕೆ ಕೊಪ್ಪ ಗ್ರಾಮದ ನಿವಾಸಿಯಾದ ನಾಗಪ್ಪಾ ಬಸಪ್ಪಾ ನಂದಿ(೫೪) ಇವರು ಜನವರಿ ೨೦, ೨೦೨೩ ರಂದು ಸಂಜೆ ೫.೩೦ ರಿಂದ ೭.೩೦ ಗಂಟೆಯ ಸುಮಾರಿಗೆ ಮನೆ ನಂಬರ:೩೪೫ ಜೋತಿ ನಗರ ಮೆನ್ ರೋಡ ಬೆಳಗಾವಿಯಿಂದ ಕಾಣೆಯಾಗಿದ್ದಾರೆ ಎಂದು ಇವರ ಹೆಂಡತಿ ಮಂಜುಳಾ ಅವರು ಎ.ಪಿ.ಎಮ್.ಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದವರ ವಿವರ:
ಎತ್ತರ:೫ ಪೂಟ, ಗೊದಿಗೆಂಪು ಮೈಬಣ್ಣ, ಉದ್ದಮೂಗು, ಸದೃಢ ಮೈಕಟ್ಟು ಹಾಗೂ ಕಪ್ಪು ಬಣ್ಣದ ಫುಲ್ ಪ್ಯಾಂಟ್, ನೀಲಿ ಬಣ್ಣದ ಫುಲ್ ತೋಳಿನ ಶರ್ಟ ಧರಿಸಿರುತಾರೆ. ಕನ್ನಡ, ಮರಾಠಿ ಮಾತನಾಡುತ್ತಾರೆ.
ಸದರಿ ಚೆಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಅಥವಾ ಪೊಲೀಸ್ ಇನ್ಸಪೆಕ್ಟರ್ ಎ.ಪಿ.ಎಂ.ಸಿ ಪೊಲೀಸ ಠಾಣೆ ಬೆಳಗಾವಿ ದೂರವಾಣಿ ಸಂಖ್ಯೆಃ (೦೮೩೧) ೨೪೦೫೨೫೦. ಮೋಬೈಲ್ ಃ ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ವ್ಯಕ್ತಿ ನಾಪತ್ತೆ
ಬೆಳಗಾವಿ : ನಗರದ ಕಂಗ್ರಾಳಿ ಕೆ.ಎಚ್ ಇಲ್ಲಿನ ನಿವಾಸಿಯಾದ ಶಿವನಗೌಡಾ ಬಸನಗೌಡಾ ಗೌಡರ(೬೩) ಇವರು ನವ್ಹೆಂಬರ್ ೧೬, ೨೦೨೨ ರಂದು ಬೆಳಿಗ್ಗೆ ೧೦ ಗಂಟೆಗೆ ಮಾರ್ಕೇಟಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಇವರ ಮಗ ವೀರನಗೌಡ ಅವರು ಎ.ಪಿ.ಎಮ್.ಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದವರ ವಿವರ:

ಎತ್ತರಃ ೫-೭ ಫೂಟ, ಗೋದಿಗೆಂಪು ಮೈಬಣ್ಣ, ಸದೃಢ ಮೈಕಟ್ಟು, ಹಾಗೂ ನೇರಳೆ ಬಣ್ಣದ ಅಂಗಿ ಹಾಗೂ ಕಂದು ಬಣ್ಣದ ಪ್ಯಾಂಟ ಧರಿಸಿರುತ್ತಾರೆ. ಕನ್ನಡ, ಭಾಷೆ ಮಾತನಾಡುತ್ತಾರೆ.
ಸದರಿ ಚೆಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಅಥವಾ ಪೊಲೀಸ್ ಇನ್ಸಪೆಕ್ಟರ್ ಎ.ಪಿ.ಎಂ.ಸಿ ಪೊಲೀಸ ಠಾಣೆ ಬೆಳಗಾವಿ ದೂರವಾಣಿ ಸಂಖ್ಯೆಃ (೦೮೩೧) ೨೪೦೫೨೫೦. ಮೋಬೈಲ್ ಃ ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಯುವಕ ನಾಪತ್ತೆ
ಬೆಳಗಾವಿ : ನಗರದ ಶಹಾಪೂರ ಇಲ್ಲಿನ ನಿವಾಸಿಯಾದ ಶಿವಾನಂದ ವಿಶ್ವನಾಥ ದಿವಟೆ(೨೯) ಇವರು ನವ್ಹೆಂಬರ್ ೧೦, ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ೧೦ ಗಂಟೆಯ ನಡುವಿನ ವೇಳಿಯಲ್ಲಿ ಮನೆಯಿಂದ ಹೋದವನು ಮರಳಿ ಬಂದಿಲ್ಲ ಎಂದು ಇವರ ಹೆಂಡತಿ ಪ್ರತಿಭಾ ಅವರು ಶಹಾಪೂರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದವರ ವಿವರ:

ಎತ್ತರಃ ೫-೯ ಫೂಟ, ಕೋಲು ಮುಖ, ನೆಟ್ಟನೆಯ ಮೂಗು, ಗೋದಿಗೆಂಪು ಮೈಬಣ್ಣ, ಸಾದಾರಣ ಮೈಕಟ್ಟು, ಹಾಗೂ ಕಪ್ಪು ಬಣ್ಣದ ಅಂಗಿ ಹಾಗೂ ಬೂದು ಬಣ್ಣದ ಪ್ಯಾಂಟ ಧರಿಸಿರುತ್ತಾರೆ. ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಸದರಿ ಚೆಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲ್ಲಿ ಪೊಲೀಸ್ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆಃ (೦೮೩೧) ೨೪೦೫೨೩೩. ಶಹಾಪೂರ ಪೊಲೀಸ ಠಾಣೆಃ ೦೮೩೧-೨೪೦೫೨೪೪, ಅಥವಾ ಪೊಲೀಸ್ ಇನ್ಸಪೆಕ್ಟರ್ ಮೊ.ನಂ ೯೪೮೦೮೦೪೦೪೬ ಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button