CrimeKannada NewsKarnataka NewsNational

*ಫ್ಲೈಓವರ್ ಮೇಲೆ ನಿಂತಿದ್ದ ಕಾರಿನಲ್ಲಿ ಮೂರು ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೂವರ ಶವ ಪತ್ತೆಯಾಗಿದ್ದು, ರಾಷ್ಟ್ರ ರಾಜ್ಯಧಾನಿಯನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.

ದೆಹಲಿಯ ಪೀರಗಢಿ ಫ್ಲೈಓವರ್ ಮೇಲೆ ನಿಂತಿದ್ದ ಕಾರಿನಲ್ಲಿ ಶವಗಳು ಪತ್ತೆಯಾಗಿದೆ.‌ ಬಾಪ್ರೋಲಾ ನಿವಾಸಿ ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ದೇವಿ (40 ವರ್ಷ) ಮತ್ತು ಶಿವ ನರೇಶ್ ಸಿಂಗ್ (47 ವರ್ಷ) ಎಂದು ಗುರುತಿಸಲಾಗಿದೆ. ಪ್ರಾಥಮಿಕವಾಗಿ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ತುಂಬಾ ಹೊತ್ತಿನಿಂದ ಕಾರು ಅಲ್ಲೇ ನಿಂತಿದ್ದರಿಂದ ಅನುಮಾನಗೊಂಡ ಜನರು ಹತ್ತಿರಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಶವಪರೀಕ್ಷೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Home add -Advt

Related Articles

Back to top button