Latest

‘ಭಾರತ್ ಮಾತಾ ಕೀ ಜೈ..’ ಎಂದು ಕೂಗಿದ ಮಾತ್ರಕ್ಕೆ ದೇಶಭಕ್ತಿಯಾಗದು

 ಪ್ರಗತಿವಾಹಿನಿ ಸುದ್ದಿ, ಸುಲ್ತಾನ್‌ಪುರ: ಕೇವಲ ‘ಭಾರತ ಮಾತಾಕಿ ಜೈ’ ಎಂದು ಕೂಗಿದ ಮಾತ್ರಕ್ಕೆ ದೇಶಭಕ್ತಿ ಎನಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಉತ್ತರಪ್ರದೇಶದ ಸುಲ್ತಾನ್ ಪುರದಲ್ಲಿ ‘ಮಕರ ಸಂಕ್ರಾಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಭಕ್ತರಾಗುವುದಕ್ಕೆ ನಿಸ್ವಾರ್ಥ ಸೇವೆಯ ಅಗತ್ಯವಿದೆ ಎಂದು ಹೇಳಿದರು.

ಶ್ರೀರಾಮನ ಹೆಸರಿನಿಂದ ಜನರ ಉನ್ನತಿಯಾಗಿಲ್ಲ. ಆದರೆ, ರಾಮನ ಕೆಲಸಗಳು ಜನರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ. ಶ್ರೀಕೃಷ್ಣನ ಹಿರಿಮೆ, ಶ್ರೀರಾಮನ ಗರಿಮೆಗಳನ್ನು ಜನರು ನಮ್ಮ ವರ್ತನೆಗಳಲ್ಲಿ ರೂಢಿಸಿಕೊಂಡಾಗ ಮಾತ್ರರಾಮ- ಕೃಷ್ಣರು  ಜನರ ಮಧ್ಯೆ ಇರುತ್ತಾರೆ ಎಂದರು.

‘ಭಾರತ ಮಾತಾಕಿ ಜೈ’ ಎಂದು ಕೂಗಿದರೆ ಅಂಥವನಲ್ಲಿ ದೇಶಭಕ್ತಿ ಇದೆ ಎಂದು ಅರ್ಥವಲ್ಲ. ಜೀವನದಲ್ಲಿ ಕಠಿಣ ಪರಿಶ್ರಮ ಪಡುವ ವ್ಯಕ್ತಿಗೆ ಮಾತ್ರವೇ ‘ಭಾರತ್‌ ಮಾತಾಕಿ ಜೈ’ ಎಂದು ಹೇಳುವ ನೈತಿಕ ಹಕ್ಕಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

Home add -Advt

“ಸರ್.. ಮೇಡಂ.. ಅನ್ನೋದು ಬಿಡಿ, ಟೀಚರ್ ಅಂತ ಕರೆಯಿರಿ..”

https://pragati.taskdun.com/sir-madam-leave-it-call-teacher-important-directive-of-kerala-state-child-rights-commission/

ಭಾರತ್ ಜೋಡೊ ಯಾತ್ರೆ ವೇಳೆ ಕುಸಿದು ಬಿದ್ದು ಕಾಂಗ್ರೆಸ್ ಸಂಸದ ಸಾವು

https://pragati.taskdun.com/congress-mp-dies-after-collapsing-during-bharat-jodo-yatra/

ಟೆನ್ನಿಸ್ ಗೆ ಸಾನಿಯಾ ಮಿರ್ಜಾ ವಿದಾಯ

https://pragati.taskdun.com/sania-mirza-says-good-bye-to-tennis/

Related Articles

Back to top button