Karnataka NewsLatest

ನಕಲಿ RTPCR ವರದಿ ನೀಡುತ್ತಿದ್ದ ಮೂವರು ಪೊಲೀಸ್ ಬಲೆಗೆ; ನಿಪ್ಪಾಣಿ ಪೊಲೀಸರ ರಾತ್ರಿ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಕರ್ನಾಟಕ ಪ್ರವೇಶಿಸಲು ಬೇಕಾದ ಆರ್ ಟಿಸಿಪಿಸಿಆರ್ ರಿಪೋರ್ಟ್ ಗಳನ್ನು ತಾವೇ ತಯಾರಿಸಿ ವಿತರಿಸುತ್ತಿದ್ದ ಜಾಲವೊಂದನ್ನು ನಿಪ್ಪಾಣಿ ಪೊಲೀಸರು ಬಯಲು ಮಾಡಿದ್ದಾರೆ.

ಖಾಸಗಿ ಟ್ರ್ಯಾವೆಲ್ಸ್ ಸಿಬ್ಬಂದಿ ತಾವೇ ನಕಲಿ RTPCR ರಿಪೋರ್ಟ್ ರಡಿ ಮಾಡಿ ಪ್ರಯಾಣಿಕರಿಗೆ ಒದಗಿಸುತ್ತಿದ್ದರು.

ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸಲಾಗಿದೆ. ಕುಂದಗೋಳ ತಾಲೂಕು ಹೊಸಕಟ್ಟೆಯ ಸುರೇಶ ಮಾಡಹಳ್ಳಿ, ಸಾತಾರದ ಸತೀಶ್ ಶಿಂದೆ, ಚಿತ್ರದುರ್ಗದ ಜಗದೀಶ ಪರಸಪ್ಪಾ ಬಂಧಿತರು.

ಶೇಫಾಲಿ ಟ್ರಾವೆಲ್ಸ್, ಆನಂದ ಟ್ರಾವೆಲ್ಸ್ ಮತ್ತು ಸಹರಾ ಟ್ರಾವೆಲ್ಸ್ ಸಿಬ್ಬಂದಿ ಈ ದಂಧೆ ನಡೆಸುತ್ತಿದ್ದರು. 9 ಜನರು ಇದರಲ್ಲಿ ಭಾಗಿಯಾಗಿದ್ದು, ಇನ್ನುಳಿದ ಆರೋಪಿಗಳಿಗೆ ಜಾಲ ಬೀಸಲಾಗಿದೆ.

Home add -Advt

ಕೊಲ್ಲಾಪುರದಲ್ಲಿ ನಕಲಿ  RTPCR ವರದಿ ತಯಾರಿಸಿ ತಮ್ಮ ಸಿಬ್ಬಂದಿ ಮೂಲಕ ಇವರು ಕರ್ನಾಟಕದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತಿದ್ದರು.

ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಪ್ರಕರಣ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.

ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –  New doc 04-Feb-2022 8.41 AM

Related Articles

Back to top button