ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ತಾಲೂಕಿನ ಗುಡಸ ಗ್ರಾಮದ ಕೃಷಿ ಕೂಲಿಕಾರ್ಮಿಕ ಮೂವರು ಮುಹಿಳೆಯರ ಮೇಲೆ ಬೊಲೇರೊ ವಾಹನ ಚಲಿಸಿ ಮೃತಪಟ್ಟ ಘಟನೆ ಶನಿವಾರ ಜರುಗಿದೆ.
ಜಮೀನಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ತೆರೆಳುತ್ತಿರುವ ಮಹಿಳೆರಾದ ಜಯಶ್ರೀ ಮಾಲದಂಡಿ (೪೦), ಪ್ರೇಮಾ ಬಂಗಾರಿ (೩೮), ಸುಮಿತ್ರಾ ಗವಾನಿ (೩೫) ಮೃಪಟ್ಟಿದ್ದಾರೆ. ಗಾಯಗೊಂಡವರಾದ ಶಂಕರವ್ವಾ ಮಾಳಕರಿ (೫೦), ಪ್ರಿಯಾಂಕ ನಂದಿಹಳ್ಳಿ(೫೦), ಯಮನವ್ವಾ ಕಾರಜೋಳ (೫೦) ಈ ಮಹಿಳೆಯರನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ವಾಹನ ಘಟಪ್ರಭಾದಿಂದ ತರಕಾರಿ ತುಂಬಿಕೊಂಡು ಬೆಳಗಾವಿ ಹೋಗಿ ಮರಳಿ ಅತಿವೇಗದಲ್ಲಿ ಬರುತ್ತಿರುವಾಗ ಈ ಘಟನೆ ಸಂಭಿವಿಸಿದೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವಿರ: ಗುಡಸ ಗ್ರಾಮದ ೮ ಕೃಷಿ ಕಾರ್ಮಿಕ ಮಹಿಳೆಯರು ಬೆಳಿಗ್ಗೆ ಜಮೀನಿನ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಮರಳಿ ಮನೆಗೆ ರಸ್ತೆ ದಂಡೆಯಿಂದ ಬುರುತ್ತಿದ್ದರು. ಸಿನಿಮಿಯ ರೀತಿಯಲ್ಲಿ ಏಕಾಏಕಿ ಅತಿವೇಗದಲ್ಲಿ ವಾಹನಬಂದು ಆರು ಜನ ಮಹಿಳೆಯರ ಮೇಲೆ ಚಲಿಸಿದೆ, ಇದರಲ್ಲಿ ಒರ್ವ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾಳೆ, ಇನ್ನೊರ್ವ ಮಹಿಳೆ ಶವ ವಾಹನದ ಕೆಳಗಡೆ ಸಿಕ್ಕಿಕೊಂಡು ೧ ಕಿಮೀ ದೂರದವರಗೆ ಶವತೆಗೆದುಕೊಂಡು ಚಲಿಸುತ್ತಿರುವಾಗ , ಸಾರ್ವಜನಿಕರು ಅಡ್ಡಗಟ್ಟಿ ವಾಹನ ನಿಲ್ಲಿಸಿ ಶವ ಹೊರತೆಗೆದಿದ್ದಾರೆ. ಇನ್ನೂರ್ವ ಮಹಿಳೆ ಗೋಕಾಕ ಖಾಸಗಿ ಅಸ್ಪತ್ರೆಯಲ್ಲಿ ಮೃತಟಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ