Kannada NewsKarnataka NewsLatest

ಮೂವರು ಯುವತಿಯರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ವಿವಿಧ ಆಧಾರ ಕೇಂದ್ರಗಳಲ್ಲಿದ್ದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ.

 

ಕಂಪೌಂಡ್ ಜಿಗಿದು ನಾಪತ್ತೆ

ಇಲ್ಲಿನ ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆ ಸ್ಪೂರ್ತಿ ಸ್ವಾಧಾರ ಗೃಹ ಆಶ್ರಯದಲ್ಲಿದ್ದ ಮೇಘಾ ಮಲ್ಲಪ್ಪ ಹಳಬರ ಎಂಬ ಮಹಿಳೆ ಜನವರಿ ೨೨ ರಂದು ಮುಂಜಾನೆ ಯಾರಿಗೂ ಹೇಳದೆ ಕೇಳದೆ ಸ್ವಾಧಾರ ಗೃಹದ ಕಾಂಪೌಂಡ್ ಜಿಗಿದು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ.
ಕಾಣೆಯಾದವರು ಮೂಲತಃ ರಾಯಭಾಗ ತಾಲ್ಲೂಕಿನ ವಡಕಿ ತೋಟ ಹಾರೂಗೇರಿ ನಿವಾಸಿಯಾಗಿದ್ದು, ಇವರು ಸ್ವಾಧಾರ ಗೃಹ ಆಶ್ರಯದಲ್ಲಿದ್ದರು. ಈ ಕುರಿತು ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚೆಹರೆ:
ನಾಪತ್ತೆಯಾದವರು ೨೨ ವರ್ಷ, ೫.೨ ಫೂಟ್ ಎತ್ತರ, ಗೋಧಿಗೆಂಪು ಮೈಬಣ್ಣ, ಸದೃಢ ದೇಹ ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಬೂದಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- (೦೮೩೧) ೨೪೦೫೨೫೦, ಮೊಬೈಲ್ ನಂ- ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದು ಎಂದು ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಪಿ.ಎಸ್.ಎಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂದನಧಾಮದಿಂದ ನಾಪತ್ತೆ

 ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ೧೭ ವರ್ಷ ೬ ತಿಂಗಳ ವಯಸ್ಸಿನ ಮಂಜುಳಾ ರಾಜು ಅವರು ಕಾಣೆಯಾಗಿದ್ದಾರೆ.

ಕಾಣೆಯಾದ ಯುವತಿಯು ಎಚ್.ಐ.ವ್ಹಿ ಪೀಡಿತರ ನಂದನಧಾಮದಲ್ಲಿದ್ದರು. ಇವರು ೮-೧೦-೨೦೨೧ ರಂದು ಆಶ್ರಮದಲ್ಲಿ ಯಾರಿಗೂ ಹೇಳದೆ ಕೇಳದೆ ನಂದನಧಾಮದಿಂದ ಹೋಗಿ ಮರಳಿ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆ ಯುವತಿ ವಿವರ:
ನಾಪತ್ತೆಯಾದ ಯುವತಿ ೧೭ ವರ್ಷ ೬ ವಯಸ್ಸು, ೫.೨ ಫೂಟ್ ಎತ್ತರ, ಸಡಪಾತಳ ಗೋಧಿ ಮೈಬಣ್ಣ, ಉದ್ದ ಮೂಗು ಮತ್ತು ಹಳದಿ ಬಣ್ಣದ ಹಾಪ್ ಟೀ ಶರ್ಟ್ ಧರಿಸಿರುತ್ತಾರೆ. ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕವರು ಕೂಡಲೇ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- (೦೮೩೧) ೨೪೦೫೨೫೦, ಮೊಬೈಲ್ ನಂ- ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದು ಎಂದು ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಪಿ.ಎಸ್.ಎಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವಾಧಾರ ಗೃಹದಿಂದ ನಾಪತ್ತೆ

ಇಲ್ಲಿನ ಶಾಹುನಗರದ ದುರ್ಗಾಮಾತಾ ಗಲ್ಲಿಯಲ್ಲಿರುವ ಶಾರದಾಮಾತಾ ಸ್ವಾಧಾರ ಗೃಹದಲ್ಲಿದ್ದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ೧೯ ವಯಸ್ಸಿನ ಭುವನೇಶ್ವರಿ ಮಹೇಶ ಅಜ್ಜನ್ನವರ ಅವರು ಕಾಣೆಯಾಗಿದ್ದಾರೆ.
ಕಾಣೆಯಾದ ಯುವತಿಯು ಜನವರಿ ೨೨ ರಂದು ಫಿರ್ಯಾದಿದಾರರ ಜೊತೆಗೆ ಕೋವಿಡ್-೧೯ ಪರೀಕ್ಷೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಹೋದಾಗ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆ ಯುವತಿ ವಿವರ:
ನಾಪತ್ತೆಯಾದ ಯುವತಿ ೧೯ ವಯಸ್ಸು, ೫ ಫೂಟ್ ಎತ್ತರ, ಗೋಧಿಗೆಂಪು ಮೈಬಣ್ಣ ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕವರು ಕೂಡಲೇ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿಯ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- (೦೮೩೧) ೨೪೦೫೨೫೦, ಮೊಬೈಲ್ ನಂ- ೯೪೮೦೮೦೪೧೦೬, ೯೪೮೦೮೦೪೦೪೭ ಗೆ ಸಂಪರ್ಕಿಸಬಹುದು ಎಂದು ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಪಿ.ಎಸ್.ಎಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕ್ಕೇ ಸುಬ್ರಮಣ್ಯ 3 ನೇ ಹಂತದ ಮಾಸ್ಟರ್‌ ಪ್ಲಾನ್‌ ಶೀಘ್ರ ಸಚಿವ ಸಂಪುಟದ ಮುಂದೆ ಪ್ರಸ್ತಾಪ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button