Latest

*ಪ್ರಬಲ ಭೂಕಂಪ: ಟಿಬೆಟ್ ನಲ್ಲಿ 53ಕ್ಕೂ ಹೆಚ್ಚು ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಟಿಬೆಟ್ ನಲ್ಲಿ ಪ್ರಬಲ ಭೂಕಂಪ ಸಂಭಭವಿಸಿದ್ದು. 53ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಂಗಳವಾರ ಬೆಳಗಿನ ಜಾವ 6:35ರ ಸಮಯದಲ್ಲಿ ಈ ಭೂಕಂಪ ಸಂಭವಿಸಿದೆ. ರಿಕ್ಟಪ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದ್ದು. ಈ ದುರಂತದಲ್ಲಿ ಇಲ್ಲಿಯವರೆಗೂ 53 ಜನರು ಸಾವನ್ನಪ್ಪಿದ್ದು. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭೂಕಂಪನದ ಕೇಂದ್ರದ ಬಳಿ ಹಲವಾರು ಕಟ್ಟಡಗಳು ಕುಸಿದಿವೆ ಮತ್ತು ಸುತ್ತಮತ್ತಲಿನ ಪ್ರದೇಶದಲ್ಲಿಯೂ ಪ್ರಬಲವಾದ ಭೂಕಂಪನದ ಅನುಭವವಾಗಿದೆ ಎಂದು ಚೀನಾದ ಪ್ರಮುಖ ಮಾಧ್ಯಮ ಸಂಸ್ಥೆ ಸಿಸಿಟಿವಿ ಮಾಹಿತಿ ಹಂಚಿಕೊಂಡಿದೆ.

ಕೇವಲ ನೇಪಾಳ, ಟಿಬೆಟ್ ಮಾತ್ರವಲ್ಲದೆ ಭಾರತದ ಕೆಲವು ಕಡೆ ಕಂಪನದ ಅನುಭವವಾಗಿದ್ದು. ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರದ ಅನೇಕ ರಾಜ್ಯದಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button