Film & EntertainmentKannada NewsKarnataka NewsLatest

*ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ ಮಾಜಿ ಎಂಎಲ್ ಸಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಲಿ ಉಗುರು ಇಟ್ಟುಕೊಂಡಿದ್ದ ಸೆಲೆಬ್ರಿಟಿಗಳಿಗೆ ಈಗ ಕಾನೂನು ಸಂಕಷ್ಟ ಶುರುವಾಗಿದೆ. ಹುಲಿ ಉಗುರು ಧಾರಣೆ ಹಿನ್ನೆಲೆಯಲ್ಲಿ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ವಿರುದ್ಧ ದೂರು ದಾಖಲಾಗಿದೆ.

ನಟ ಜಗ್ಗೇಶ್ ಹುಲಿ ಉಗುರು ಧರಿಸಿದ್ದ ಲಾಕೆಟ್ ತೋರಿಸಿ ಇದು ನಾನು 20 ವರ್ಷದವನಿದ್ದಾಗ ನನ್ನ ತಾಯಿ ಕೊಟ್ಟಿದ್ದರು. ನನ್ನ ಮಗ ಹುಲಿಯಂತೆ ಇರಲಿ ಎಂದು ಹಾಕಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಹಳೇ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮಾಜಿ ಎಂಎಲ್ ಸಿ ಪಿ.ಆರ್.ರಮೇಶ್, ನಟ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.

ನಟ ಜಗ್ಗೇಶ್ ಬಳಿ ಇರುವ ಹುಲಿ ಉಗುರು ಅಸಲಿಯೋ, ನಕಲಿಯೋ? ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಕಾನೂನು ಕ್ರಮ ರೈತರು, ಅರಣ್ಯ ಪ್ರದೇಶದಲ್ಲಿರುವವರಿಗೆ ಮಾತ್ರವೇ ಅಥವಾ ಸೆಲೆಬ್ರಿಟಿಗಳು, ದೊಡ್ಡ ಡೊಡವರಿಗೂ ಅನ್ವಯವಾಗಲಿದೆಯೇ? ಹುಲಿ ಉಗುರು ಸಂಗ್ರಹಿಸಿರುವ ಎಲ್ಲರ ವಿರುದ್ಧವೂ ವನ್ಯ ಜೀವಿ ಸಂರಕ್ಷಕಾಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button