ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ತಿರುಪತಿಯಲ್ಲಿರುವ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲೇ ಕರ್ನಾಟಕದ ರಾಮನಗರದಲ್ಲೂ ತಿಮ್ಮಪ್ಪಯ್ಯನ ದೇವಸ್ಥಾನ ನಿರ್ಮಾಣವಾಗಲಿದೆ.
ಇದಕ್ಕಾಗಿ 15 ಎಕರೆ ಜಾಗ ನೀಡಲು ಸರಕಾರ ನಿರ್ಧರಿಸಿದೆ.
ತಿರುಪತಿಯಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಿನವಿಡಿ ನಿಂತರೂ ದರ್ಶನ ಕಷ್ಟ. ಅದರಲ್ಲೂ ಕರ್ನಾಟಕದ ಭಕ್ತರ ಸಂಖ್ಯೆ ಅಧಿಕ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ತಿರುಪತಿ ಮಾದರಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ತಿರುಪತಿ ದೇವಸ್ಥಾನ ಸಮಿತಿ ನಿರ್ಧರಿಸಿದೆ. ತಿರುಪತಿ ಟ್ರಸ್ಟ ಸ್ವತಃ ಕರ್ನಾಟಕದ ದೇವಸ್ಥಾನದ ಆಡಳಿತವನ್ನೂ ನೋಡಿಕೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ