
ಪ್ರಗತಿವಾಹಿನಿ ಸುದ್ದು; ತಿರುಪತಿ: ತಿರುಪತಿ ಬೆಟ್ಟದಲ್ಲಿ ಚಿರತೆ ಹಾವಳಿಗಳು ಭಕ್ತರನ್ನು ಇನ್ನಿಲ್ಲದಂತೆ ಭಯಭೀತರನ್ನಾಗಿ ಮಾಡಿದೆ. ಬೆಟ್ಟದ ಕಾಲುದಾರಿಯಲ್ಲಿ ಇದೀಗ ಮತ್ತೊಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಬೆಟ್ಟದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಈ ಚಿರತೆ ಸೆರೆ ಹಿಡಿಯಲಾಗಿದೆ. ತಿರುಪತಿ ಬೆಟ್ಟದ ಕಾಲ್ನಡಿಗೆ ಮಾರ್ಗದ 2850ನೇ ಮೆಟ್ಟಿಲುಗಳ ಬಳಿ ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಸಧ್ಯ ಚಿರತೆ ಈ ಬೋನ್ ಗೆ ಬಿದ್ದಿದೆ. ಈ ಮೂಲಕ ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಈವರೆಗೆ ಒಟ್ಟು 6 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.
ಈ ಹಿಂದೆ ಚಿರತೆ ಸಿಕ್ಕ ಜಾಗದಲ್ಲಿಯೇ 6ನೇ ಚಿರತೆಯೂ ಸೆರೆ ಸಿಕ್ಕಿದೆ. ತಿರುಪತಿ ಬೆಟ್ಟದ ಪಾದಚಾರಿ ಮಾರ್ಗದಲ್ಲಿ ಚಿರತೆ ಕಾಟ ಹೆಚ್ಚಾಗಿದ್ದರಿಂದ ಟಿಟಿಡಿ ಹಾಗೂ ಅರಣ್ಯ ಇಲಾಖೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಅಲಿಪಿರಿಯಲ್ಲಿ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಮಾತ್ರವೇ ಭಕ್ತರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮಧ್ಯಾಹ್ನ 2ರ ಬಳಿಕ ಈ ಮಾರ್ಗದಲ್ಲಿ ಅನುಮತಿ ಇಲ್ಲ.
ಘಟ್ಟ ಪ್ರದೇಶದಲ್ಲಿ ಸಂಜೆ 6 ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಭಕ್ತರ ಸುರಕ್ಷತೆಗಾಗಿ ಅರಣ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ