National

*ಬೆಳ್ಳಂಬೆಳಿಗ್ಗೆ ನಿರ್ಮಾಪಕರಿಗೆ IT ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ: ಟಾಲಿವುಡ್ ನ ಖ್ಯಾತ ನಿರ್ಮಾಪಕರಿಗೆ ಬೆಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಮನೆ ಸೇರಿದಂತೆ ಹೈದರಾಬಾದ್ ನ 8 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಿರ್ಮಾಪಕ ದಿಲ್ ರಾಜು ಪುತ್ರಿ ಹನ್ಸಿಕಾ ಮನೆ, ಕಚೇರಿ ಮೇಲೂ ದಾಳಿ ನಡೆದಿದೆ. ಪುಷ್ಪ-2 ಚಿತ್ರ ನಿರ್ಮಾಪಕ ಸಂಸ್ಥೆ ಮೇಲೂ ದಾಳಿ ನಡೆಸಲಾಗಿದೆ.

ಮೈತ್ರಿ ಮೂವಿ ಮೇಕರ್ಸ್ ನವೀನ್, ಸಿಇಓ ಚರ್ರಿ ಕಚೇರಿ ಹಾಗೂ ಆಪ್ತರ ಕಚೇರಿಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಕ್ರಾಂತಿಗೆ ವಸ್ತುನ್ನಾಮ್ ಚಿತ್ರದ ನಿರ್ದೇಶಕ ಅನಿಲ್ ಕಚೇರಿ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ವೆಂಕಟೇಶ್ವರ ಪ್ರೊಡೆಕ್ಷನ್ ಹೌಸ್ ಮೇಲೂ ದಾಳಿ ನಡೆದಿದೆ. ಹೈದರಾಬಾದ್ ನ 8 ಕಡೆಗಳಲ್ಲಿ 65 ಐಟಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button