Latest

ವಿಚ್ಛೇದನ ಘೋಷಿಸಿದ ಸಮಂತಾ-ನಾಗಚೈತನ್ಯ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್; ಟಾಲಿವುಡ್ ನ ಸ್ಟಾರ್ ದಂಪತಿಗಳಾಗಿದ್ದ ಸಮಂತಾ-ನಾಗಚೈತನ್ಯ ದಾಂಪತ್ಯ ಜೀವನ ಅಂತ್ಯಗೊಂಡಿದ್ದು, ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಇಬ್ಬರೂ ಘೋಷಿಸಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಬರೆದುಕೊಂಡಿದ್ದು, ಸಾಕಷ್ಟು ಯೋಚನೆ ಮಾಡಿದ ನಂತರ ನಾವಿಬ್ಬರೂ ದಾಂಪತ್ಯ ಜೀವನದಿಂದ ದೂರವಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಲವು ದಿನಗಳಿಂದ ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ ನಟ ಅಕ್ಕಿನೇನಿ ನಾಗಾರ್ಜುನ್ ತಮ್ಮ ಮಗ ಹಾಗೂ ಸೊಸೆ ನಡುವೆ ರಾಜಿ ಸಂದಾನ ಮಾಡಿಸಿ ಇಬ್ಬರನ್ನೂ ಮತ್ತೆ ಒಂದು ಮಾಡುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಇದೀಗ ಅಕ್ಕಿನೇನಿ ಕುಟುಂಬದಿಂದ ಹೊರಬರುತ್ತಿರುವುದಾಗಿ ಸಮಂತಾ ಪ್ರಕಟಿಸಿದ್ದಾರೆ.

ನಾವಿಬ್ಬರೂ ಸಾಕಷ್ಟು ಯೋಚಿಸಿ ದಾಂಪತ್ಯ ಜೀವನದಿಂದ ಹೊರಬರಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿದ್ದೆವು. ನಮ್ಮಿಬ್ಬರ ಆ ಸ್ನೇಹವೇ ವೈವಾಹಿಕ ಜೀವನಕ್ಕೆ ಕಾಲಿಡುವ ನಿರ್ಧಾರಕ್ಕೆ ಬಂದೆವು. ಸ್ನೇಹ ಸಂಬಂಧವೇ ನಮ್ಮಿಬ್ಬರ ಶಕ್ತಿಯಾಗಿತ್ತು. ಆದರೆ ಇನ್ನುಮುಂದೆ ನಾವಿಬ್ಬರು ಪತಿ-ಪತ್ನಿಯಾಗಿ ಮುಂದುವರೆಯುವುದಿಲ್ಲ. ನಮ್ಮಿರ ನಡುವೆ ವಿಶೇಷ ಬಾಂಧವ್ಯ ಮಾತ್ರ ಸದಾ ಇರಲಿದೆ. ಜೀವನದಲ್ಲಿ ನಾವಿಬ್ಬರು ನಮ್ಮದೇ ದಾರಿಯಲ್ಲಿ ಮುಂದೆ ಸಾಗುತ್ತೇವೆ. ಕಷ್ಟದ ಸಂದರ್ಭದಲ್ಲಿಯೂ ನಮ್ಮ ಜೊತೆಗಿದ್ದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Home add -Advt

ಸಮಂತಾ ಹಾಗೂ ನಾಗಚೈತನ್ಯ 11 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. 2017 ಅಕ್ಟೋಬರ್ 7ರಂದು ಮದುವೆಯಾಗಿದ್ದ ಈ ಜೋಡಿ ಕೇವಲ 4 ವರ್ಷಗಳಲ್ಲೇ ದೂರವಾಗಲು ನಿರ್ಧರಿಸಿದ್ದಾರೆ.
ಡಿಎಸ್ ಪಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ರಾಸಲೀಲೆ ಪ್ರಕರಣ; ಸೇವೆಯಿಂದ ವಜಾಗೊಳಿಸಿ ಆದೇಶ

Related Articles

Back to top button