ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಟಾಲಿವುಡ್ ಸ್ಟಾರ್ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದ್ದು, ವಿಚ್ಛೇದನ ನಿರ್ಧಾರಕ್ಕೂ ಬಂದಿದ್ದಾರೆ ಎಂಬ ಸುದ್ದಿಗಳು ಹಬ್ಬುತ್ತಿವೆ. ಈ ನಡುವೆ ಸಮಂತಾ ಹೊಸ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು, ಅವರ ಹಾಟ್ ಫೋಟೋಗಳು ಭಾರಿ ವೈರಲ್ ಆಗಿವೆ.
ಇತ್ತೀಚೆಗೆ ಸಮಂತಾ ನಾಗಾರ್ಜುನ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದು, ತಮ್ಮ ಮಾವ ನಟ ನಾಗುರ್ಜನ್ ಅವರ ಹುಟ್ಟುಹಬ್ಬದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಕೆಲ ದಿನಗಳ ಹಿಂದೆ ಗೋವಾದಲ್ಲಿ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದ ಸಮಂತಾ ಜೊತೆಗೆ ಪತಿ ನಾಗಚೈತನ್ಯ ಸುಳಿವಿರಲಿಲ್ಲ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಸರ್ ನೇಮ್ ಕೂಡ ತೆಗೆದುಹಾಕಿದ್ದು, ಸಮಂತಾ ಹಾಗೂ ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಲು ಕಾರಣವಾಗಿದೆ.
ಕುಟುಂಬದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಂತಾ ಈ ಮಧ್ಯೆ ಹಾಟ್ ಫೋಟೊಶೂಟ್ ಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಲೂಯಿಸ್ ವಿಟಾನ್ ಕಂಪನಿಯ ಬ್ಯಾಗ್ ಹಿಡಿದು ಮಾದಕ ಪೋಸ್ ನೀಡಿರುವ ಸಮಂತಾ ಹಾಟ್ ಲುಕ್ ನಲ್ಲಿ ಗಮನ ಸೆಳೆದಿದ್ದಾರೆ. ಹಲವು ಬ್ರಾಂಡೆಡ್ ಕಂಪನಿಗಳ ಬಟ್ಟೆ, ಬ್ಯಾಗ್ ಗಳ ಪ್ರಚಾರದಲ್ಲಿ ತೊಡಗಿರುವ ಸಮಂತಾ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಸಮಂತಾ ಇನ್ ಸ್ಟಾಗ್ರಾಂ ನ ಪ್ರತಿ ಪೋಸ್ಟ್ ಗೆ 7ರಿಂದ 13 ಲಕ್ಷ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಇದೀಗ ಲೂಯಿಸ್ ವಿಟಾನ್ ಬ್ಯಾಗ್ ಹಿಡಿದು ಹಾಟ್ ಲುಕ್ ನಲ್ಲಿ ಮಿಂಚಿರುವ ಸಮಂತಾ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಭೀಕರ ರಸ್ತೆ ಅಪಘಾತಕ್ಕೀಡಾದ ಮತ್ತೋರ್ವ ನಟ; ಪ್ರಜ್ಞಾಹೀತ ಸ್ಥಿತಿಯಲ್ಲಿ ಸಾಯಿ ಧರಮ ತೇಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ