ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಸಮರ್ಥ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ನೂತನ ಚೇರಮನ್ ಆಗಿ ಎನ್.ಡಿ.ಜೋಶಿ ಹಾಗೂ ವೈಸ್ ಚೇರಮನ್ ಆಗಿ ಸುಹಾಸ್ ಆರ್. ಕುಲಕರ್ಣಿ ಆಯ್ಕೆಯಾಗಿದ್ದಾರೆ.
ಮುಂದಿನ 5 ವರ್ಷಗಳಿಗಾಗಿ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಗಣಪತಿ ಎ.ಜೋಶಿ, ವಿನಾಯಕ ಜಿ.ಜೋಶಿ, ವಿನಾಯಕ ಸಿ.ಕುಲಕರ್ಣಿ, ಪ್ರದೀಪ ಜಿ.ಕುಲಕರ್ಣಿ, ಸುನಂದಾ ಸಿ.ಅಳತೆಕರ್, ಅಜಯ ಸುನಾಳಕರ್, ಛಾಯಾ ಎನ್.ಜೋಶಿ, ಅನೀಲ ವಿ.ಭಂಡಾರಿ, ಪರಶುರಾಮ ಎನ್.ಕಾಂಬಳೆ ಆಡಳಿತ ಮಂಡಳಿಯಲ್ಲಿದ್ದಾರೆ.