Kannada NewsKarnataka NewsNationalPolitics

*ಉಡುಪಿಯ ತ್ರಾಸಿ ಬಿಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ*

ಪ್ರಗತಿವಾಹಿನಿ ಸುದ್ದಿ: ಕಳೆದ ಕೆಲವು ದಿನಗಳ ಹಿಂದೆ ಮುರುಡೇಶ್ವರ ಬೀಚ್ ನ ಸಮುದ್ರದಲ್ಲಿ ಮುಳುಗಿ ಕೋಲಾರ ಜಿಲ್ಲೆಯ ವಸತಿ ನಿಲಯದ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಉಡುಪಿಯ ತ್ರಾಸಿ ಬಿಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ನಾವಿಕ ಒಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆಯಾಗಿದ್ದಾರೆ. ಬೋಟ್ ಪಲ್ಟಿಯಾದ ಬಳಿಕ, ಲೈಫ್ ಜಾಕೆಟ್ ತೊಟ್ಟಿದ್ದ ಬೆಂಗಳೂರು ಮೂಲದ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಣ್ಮರೆಯಾಗಿರುವ ರೈಡರ್ ರವಿದಾಸ್ ಗಾಗಿ ಕರಾವಳಿ ಪೊಲೀಸ್ ಪಡೆಯಿಂದ ಇದೀಗ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಕುರಿತಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button