Kannada NewsKarnataka NewsLatest

*ಪ್ರವಾಸಕ್ಕೆ ಬಂದಿದ್ದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಪತಿಯೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ.

40 ವರ್ಷದ ಎಮಿ ಯಮಾಝಿಕಿ ನಾಪತ್ತೆಯಾಗಿರುವ ಮಹಿಳೆ. ಫೆ.5ರಂದು ಗೋಕರ್ಣ ಪ್ರವಾಸಕ್ಕೆಂದು ಜಪಾನ್ ನಿಂದ ಎಮಿ ಯಮಾಝಿಕಿ ಪತಿಯೊಂದಿಗೆ ಬಂದಿದ್ದಾರೆ. ದಂಪತಿ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪ್ ನಲ್ಲಿ ತಂಗಿದ್ದರು.

Home add -Advt

ಬೆಳಿಗ್ಗೆ 10:30ರ ಸುಮಾರಿಗೆ ನೇಚರ್ ಕ್ಯಾಂಪ್ ನಿಂದ ಹೊರ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ಕಂಗಾಲಾಗಿರುವ ಪತಿ ದೈ ಯಮಾಝಕಿ ಗೋಕರ್ಣ್ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.


Related Articles

Back to top button