Uncategorized

*ಹುಕ್ಕೇರಿ ಪೊಲೀಸರ ಕಾರ್ಯಾಚರಣೆ; ಖತರ್ನಾಕ್ ಟ್ರ್ಯಾಕ್ಟರ್ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಟ್ರ್ಯಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಟ್ರ್ಯಾಕ್ಟರ್ ಕಳ್ಳರನ್ನು ಬಂಧಿಸಿದ್ದಾರೆ.

ಪಿಐ ಎಂ.ಎಂ. ತಹಶೀಲ್ದಾರ, ಬೆಳಗಾವಿ ಎಸ್.ಪಿ ಹಾಗೂ ಹೆಚ್ಚುವರಿ ಎಸ್ ಪಿ ಎಂ. ವೇಣುಗೋಪಾಲ ಡಿ.ಎಸ್.ಪಿ ದೂದಪೀಠ ಎಚ್. ಮುಲ್ಲಾ ಮಾರ್ಗದರ್ಶನದಲ್ಲಿ ಸದರಿ ಪ್ರಕರಣವನ್ನು ಬೆನ್ನಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕಳ್ಳತನವಾಗಿದ್ದ 2,50,000ರೂ ಮೌಲ್ಯದ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಎಂಜಿನನ್ನು ವಶಪಡಿಸಿಕೊಂಡು ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಟ್ರ್ಯಾಕ್ಟರ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಎಮ್. ಎಮ್ ತಹಶಿಲ್ದಾರ. ಪಿ.ಐ
ಹುಕ್ಕೇರಿ ಹಾಗೂ ಸಿಬ್ಬಂದಿ ಎ.ಎಸ್. ಸನದಿ ಎ.ಎಸ್.ಐ, ಕೆ.ಎನ್, ಪಿಂಜಾರ ಎ.ಎಸ್.ಐ, ಸಿ.ಡಿ. ಪಾಟೀಲ ಸಿಎಚ್‌ , ಜಿ.ಎಸ್. ಕಾಂಬಳೆ ಸಿಪಿಸಿ , ಮಂಜುನಾಥ್ ಕಬ್ಬೂರೆ, ಎಸ್.ಆರ್. ರಾಮದುರ್ಗ ಸಿಪಿಸಿ, ಯು. ವಾಯ್ ಅರಭಾಂವಿ ಸಿಪಿಸಿ, ಎ. ಎಲ್ ನಾಯಕ ಸಿ.ಪಿ.ಸಿ, ಎಂ. ಎಸ್. ಕಲ್ಲೂರ ಸಿಪಿಸಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗ ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button