
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೈಸೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಹುಸ್ಕೂರು ಬಳಿ ಸಂಭವಿಸಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಲಾರಿ ಸಂಪೂರ್ಣ ಜಖಂಗೊಂಡಿದ್ದು, ರೈಲಿನ ಎಂಜಿನ್ ಕೂಡ ಹಾನಿಗೀಡಾಗಿದೆ.
ಹುಸ್ಕೂರು ರೈಲ್ವೆ ಹಳಿಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ರೈಲ್ವೆ ಹಳಿ ಮೇಲೆ ಕ್ಯಾಂಟರ್ ಲಾರಿ ಸಾಗುತ್ತಿದ್ದಾಗ ಏಕಾಏಕಿ ವೇಗವಾಗಿ ಬಂದ ರೈಲು ಡಿಕ್ಕಿಹೊಡೆದು ಈ ದುರ್ಘಟನೆ ಸಂಭವಿಸಿದೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆರಿಗೆ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಹಸುಗೂಸುಗಳನ್ನು ಎತ್ತಿಕೊಂಡು ಹೊರಗೋಡಿ ಪ್ರಾಣ ಉಳಿಸಿಕೊಂಡ ಮಹಿಳೆಯರು