
ಪ್ರಗತಿವಾಹಿನಿ ಸುದ್ದಿ: ಸುರಿಯುತ್ತಿರುವ ನಿರಂತರ ಮಳೆಗೆ ಈಗಾಗಲೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಇಂದು ಮಣ್ಣು ಕುಸಿತ ಹಾಗೂ ಮರಗಳು ಬಿದ್ದಿರುವ ಕಾರಣ ರೈಲು ಹಾಗೂ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ.
ಹಾಸನ ಜಿಲ್ಲೆತ ಸಕಲೇಶಪುರ ತಾಲೂಕಿನ ಎಡಕುಮಾರಿ ಬಳಿ ಹಳಿ ಮೇಲೆ ಮಣ್ಣು ಹಾಗೂ ಮರಗಳು ಜಾರಿಬಿದ್ದ ಪರಿಣಾಮ, ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದ 63/00080 70/6000 ಸುಮಾರು ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹಳಿಗಳ ಮೇಲೆ ನೀರು ಹರಿಯುತ್ತಿರುವುದರಿಂದ ತೊಂದರೆ ಉಂಟಾಗಿದೆ.
ಘಟನೆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರಯಾಣಿಕ ಮತ್ತು ಸರಕು ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿ, ಹಳಿ ಮೇಲೆ ಬಿದ್ದ ಮಣ್ಣು, ಮರ ಗಿಡ ತೆರವುಗೊಳಿಸಿ ಸಂಚಾರ ಪುನಃ ಪ್ರಾರಂಭಿಸಲು ಶ್ರಮಿಸುತ್ತಿದ್ದಾರೆ.