ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ವವವನ್ನು ಅದ್ಧೂರಿಯಾಗಿ ಆಚರಿಸಲು ಅವಕಾಶ ನೀಡಬೇಕೆನ್ನುವ ಹೋರಾಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಸರಕಾರ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಈವರೆಗೂ ಹಸಿರು ನಿಶಾನೆ ತೋರಿಸಿಲ್ಲ.
ಸರ್ಕಾರದ ನಡೆಯನ್ನ ಖಂಡಿಸಿ ಬೆಳಗಾವಿಯ ಯುವಕರು ಮತ್ತು ನಾಡ ಅಭಿಮಾನಿಗಳು ಸೇರಿಕೊಂಡು ಇವತ್ತು ಟ್ವಿಟರ್ ಅಭಿಯಾನ ಇಟ್ಟುಕೊಂಡಿದ್ದರು. ಅದು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಇಡೀ ಭಾರತದಲ್ಲೆ 5 ನೇಯ ಸ್ಥಾನಕ್ಕೆ ಟ್ರೆಂಡಾಗಿ 20 ಸಾವಿರಕ್ಕೂ ಹೆಚ್ಚು ಟ್ವಿಟ್ಗಳು ಬರೀ ಮೂರು ಘಂಟೆಯಲ್ಲಾಗಿದ್ದು ವಿಶೇಷ. ರಾಜ್ಯಾದ್ಯಂತ ಕನ್ನಡಾಭಿಮಾನಿಗಳು ಅಭಿಯಾನದಲ್ಲಿ ಭಾಗವಹಿಸಿದ್ದು.
ಕನ್ನಡ ರಾಜ್ಯೋತ್ಸವದ ದಿನ ಕರಾಳಿ ದಿನ ಆಚರಿಸುವ ಎಂಇಎಸ್ ಪುಂಡರನ್ನು ತಡೆಯುವ ಗೋಜಿಗೆ ಹೋಗದ ಸರಕಾರ ಕನ್ನಡಿಗರು ಮನೆ ಮನೆಯ ಹಬ್ಬದಂತೆ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ ತಡೆ ನೀಡುವುದಕ್ಕೆ ಕನ್ನಡಾಭಿಮಾನಿಗಳು ಸಿಡಿದೆದ್ದಿದ್ದಾರೆ.
ಸರಕಾರ ಈ ಅಭಿಯಾನದಿಂದಲಾದರೂ ಎಚ್ಚೆತ್ತುಕೊಳ್ಳುವುದೇ? ಕಾದು ನೋಡಬೇಕಿದೆ.
#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
ರಾಜ್ಯಾದ್ಯಂತ “ಕನ್ನಡಕ್ಕಾಗಿ ನಾವು” ಅಭಿಯಾನ; ಹಲವು ಸ್ಪರ್ಧೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ