Kannada NewsLatest

ರೈಲು ಹಳಿಗಳ ಮೇಲೆ ಉರುಳಿಬಿದ್ದ ಮರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: 

ಖಾನಾಪುರ ತಾಲ್ಲೂಕಿನ ನಾಗರಗಾಳಿ ತಾವರಗಟ್ಟಿ ರೈಲ್ವೆ ನಿಲ್ದಾಣಗಳ‌ ನಡುವಿನ ಅರಣ್ಯದಲ್ಲಿ ಸಾಗುವ ರೈಲು ಮಾರ್ಗದ ಹಳಿಗಳ ಮೇಲೆ  ಭಾನುವಾರ ಸಂಜೆ ಮರವೊಂದು ಉರುಳಿದ ಪರಿಣಾಮ ಲೋಂಡಾ ಅಳ್ನಾವರ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಕೆಲಕಾಲ ತಡವಾಗಿ ಸಂಚರಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಸಿಬ್ಬಂದಿ ಹಳಿಗಳ‌ ಮೇಲೆ ಬಿದ್ದಿದ್ದ ಮರವನ್ನು ತೆರವು ಗೊಳಿಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Home add -Advt

Related Articles

Back to top button