Latest

ಟಿಎಸ್ಎಸ್ ಸುಪರ್ ಮಾರ್ಕೆಟ್ ಅನಿರ್ಧಿಷ್ಠಾವಧಿ ಬಂದ್

ಪ್ರಗತಿವಾಹಿನಿ ಸುದ್ದಿ, ಶಿರಸಿ -ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಬಹುಪಾಲು ಜನತೆ ಅವಲಂಬಿಸಿರುವ ಶಿರಸಿಯ ಪ್ರಸಿದ್ಧ ಟಿಎಸ್ಎಸ್ ಸುಪರ್ ಮಾರ್ಕೆಟ್ ಶನಿವಾರ ಸಂಜೆ ಬಾಗಿಲು ಬಂದ್ ಮಾಡಿದೆ.

ಕೊರೋನಾ ವೈರಸ್ ಪರಿಣಾಮವಾಗಿ ಸರಕಾರದ ಆದೇಶದಂತೆ ಸುಪರ್ ಮಾರ್ಕೆಟ್ ಬಾಗಿಲು ಹಾಕಲಾಗಿದ್ದು, ಅನಿರ್ಧಿಷ್ಠಾವಧಿ ಬಂದ್ ಇರಲಿದೆ ಎಂದು ಪ್ರಕಟಿಸಲಾಗಿದೆ.

ಈ ಭಾಗದ ಜನರ ಎಲ್ಲ ಅವಶ್ಯಕತೆಗಳನ್ನೂ ಪೂರೈಸುವ ಅತಿ ದೊಡ್ಡ ಕೇಂದ್ರ ಟಿಎಸ್ಎಸ್ ಸುಪರ್ ಮಾರ್ಕೆಟ್ ಆಗಿದೆ. ಪ್ರತಿ ದಿನ ಜನ ಭಾರಿ ಪ್ರಮಾಣದಲ್ಲಿ ಬಂದು ಅವಶ್ಯಕ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಶಿರಸಿ ಜಾತ್ರೆಯ ವೇಳೆಯಲ್ಲಿ ಸಹ ಸುಪರ್ ಮಾರ್ಕೆಟ್ ಜನದಟ್ಟಣೆ ಕಡಿಮೆಯಾಗಿರಲಿಲ್ಲ.

ಶನಿವಾರ ಬಂದ್ ಮಾಡುವ ವೇಳೆ ಕೂಡ ದೊಡ್ಡ ಪ್ರಮಾಣದಲ್ಲಿ ಜನರು ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದರು. ಅವರನ್ನೆಲ್ಲ ಒತ್ತಾಯಪೂರ್ವಕವಾಗಿ ಹೊರಗೆಕಳಿಸಬೇಕಾಯಿತು. ಸಂಜೆ ಬಂದ ಜನರು ನಿರಾಸೆಯಿಂದ ಮರಳಬೇಕಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button