
ಪ್ರಗತಿವಾಹಿನಿ ಸುದ್ದಿ: ಕೃಷಿಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ಹರ್ಷಪುರ ಗ್ರಾಮದದಲ್ಲಿ ಈ ದುರಂತ ಸಂಭವಿಸಿದೆ. ದನ ಮೇಯಿಸಲು ಹೋಗಿದ್ದ ಅಕ್ಕ-ತಂಗಿ ಇಬ್ಬರೂ ಕೃಷಿಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಗಂಗಮ್ಮ (37) ಹಾಗೂ ಶಕುಂತಲಾ (36) ಮೃತ ದುರ್ದೈವಿಗಳು.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.