
ಸಾವಿಗೂ ಮುನ್ನ ಮಾಡಿಟ್ಟ ವಿಡಿಯೋ ಪತ್ತೆ
ಪ್ರಗತಿವಾಹಿನಿ ಸುದ್ದಿ; ತುಮಕೂರು: ಮೂರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಬಳಿಕ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ಗರೀಬ್ ಸಾಬ್ ಹಾಗೂ ಒಅತ್ನಿ ಸಮಯ್ಯಾ ತಮ್ಮ ಮೂವರು ಮಕ್ಕಳಾದ ಹಜೀರಾ, ಮೊಹಮ್ಮದ್ ಶಬ್ಬೀರ್, ಮೊಹಮ್ಮದ್ ಮುನೀರ್ ಅವರನ್ನು ಕತ್ತು ಹಿಸುಕಿ ಕೊಲೆಗೈದು ಬಳಿಕ ನೇಣಿಗೆ ಕೊರಳೊಡ್ಡಿದ್ದಾರೆ.
ಸಾವಿಗೂ ಮುನ್ನ ಎರಡು ಪುಟಗಳ ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಅಲ್ಲದೇ 5 ನಿಮಿಷಗಳ ವಿಡಿಯೋ ಕೂಡ ಮಾಡಿಟ್ಟಿದ್ದಾರೆ. ವಿಡಿಯೋದಲ್ಲಿ ತಾವು ವಾಸವಾಗಿದ್ದ ಬಾಡಿಗೆ ಮನೆಯ ಕೆಳಗಡೆ ಮನೆಯ ಖಲಂದರ್ ಹಾಗು ಆತನ ಕುಟುಂಬದವರು ಹಿಂಸೆ, ಕಿರುಕುಳ ನೀಡುತ್ತಿರುವುದಾಗಿ ಗರೀಬ್ ಸಾಬ್ ತಿಳಿಸಿದ್ದಾರೆ.
ಸಾಲ ಪಡೆದುಕೊಂಡಿದ್ದಕ್ಕೆ ವಾರಕ್ಕೆ ಬಡ್ಡಿ ಕಟ್ಟಬೇಕಿತ್ತು. ಕಟ್ಟದಿದ್ದರೆ ಕಿರುಕುಳ ನೀಡುತ್ತಿದ್ದ ಅಲ್ಲದೇ ಎಲ್ಲರ ಮುಂದೆ ಪತ್ನಿ, ಮಕ್ಕಳಿಗೆ ಅವಮಾನ ಮಾಡುತ್ತಿದ್ದ. ಹಲವು ಬಾರಿ ಹಲ್ಲೆ ಮಾಡಿರುವುದಾಗಿಯೂ ಹೇಳಿದ್ದಾರೆ. ಕಿರುಕುಳಕ್ಕೆ ಬೇಸತ್ತು ಇಡಿ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಖಲಂದರ್ ಹಾಗೂ ಆತ್ನಮ ಮನೆಯವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸಾವಿಗೆ ಶರಣಾಗಿದ್ದಾರೆ.
ಪ್ರಕರಣ ಸಂಬಂಧ ತಿಲಕ್ ಪಾರ್ಕ್ ಪೊಲೀಸರು ಖಲಂದರ್, ಖಲಂದರ್ ಮಗಳು ಸಾನಿಯಾ, ಖಲಂದರ್ ಮಗ ಹಾಗೂ ಇನ್ನೋರ್ವ ಮಹಿಳೆ ಶಬಾನಾ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ