ಪ್ರಗತಿವಾಹಿನಿ ಸುದ್ದಿ; ತುಮಕೂರು: ಎಣ್ಣೆ ಕಿಕ್ಕಿನಲ್ಲಿಯೇ ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ಚಿಕ್ಕಸಾರಂಗಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಪ್ರತಿದಿನ ಮದ್ಯದ ನಶೆಯಲ್ಲಿಯೇ ಇರುವ ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿ ಕುಡಿದ ಅಮಲಿನಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಳು. ಸಾಲದ್ದಕ್ಕೆ ಮದ್ಯದ ನಶೆ ಇಳಿದಾಗ ಮತ್ತೆ ಸೇವಿಸಲೆಂದು ಸಾರಾಯಿ ಬಾಟಲ್ ಗಳನ್ನೇ ತಂದು ತನ್ನ ಡ್ರಾಯರ್ ನಲ್ಲಿ ಇಟ್ಟಿದ್ದಳು.
ಗಂಗಲಕ್ಷ್ಮಮ್ಮಳ ಕುಡಿತದ ಕಾಟಕ್ಕೆ ಬೇಸತ್ತ ಸಹೋದ್ಯೋಗಿ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಬೇರೆ ಶಾಲೆಗಳತ್ತ ಮುಖಮಾಡಿದ್ದರು. ಆದರೆ ಅದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಪಾಡು ಮಾತ್ರ ಹೇಳತೀರದಾಗಿತ್ತು.
ಕಳೆದ 20 ವರ್ಷಗಳಿಂದ ಚಿಕ್ಕಸಾರಂಗಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಲಕ್ಷ್ಮಮ್ಮ ನಿತ್ಯವೂ ಕುಡಿದು ಬಂದು ಪಾಠ ಮಾಡುತ್ತಿದ್ದಳು. ಯಾರ ಬುದ್ಧಿವಾದಕ್ಕೂ ಬಗ್ಗದ ಶಿಕ್ಷಕಿಯ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಶಾಲೆಗೆ ದೌಡಾಯಿಸಿ ಶಿಕ್ಷಕಿಯ ಟೇಬಲ್ ಹೊರತಂದು ಡ್ರಾಯರ್ ತೆಗೆದು ನೋಡಿದಾಗ ಮದ್ಯದ ಬಾಟಲ್ ಗಳು ಪತ್ತೆಯಾಗಿವೆ. ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಶಿಕ್ಷಕಿಯನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಬಿಇಓ ಆಗಮಿಸುತ್ತಿದ್ದಂತೆ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ನಾಟಕವಾಡಿದ್ದಾಳೆ. ಗ್ರಾಮಸ್ಥರ ಪ್ರತಿಭಟನೆ ಒತ್ತಡಕ್ಕೆ ಅಧಿಕಾರಿಗಳು ಶಿಕ್ಷಕಿಯನ್ನು ಕರೆದು ಬಿಇಓ ವಾಹನದಲ್ಲಿ ಕರೆದೊಯ್ದಿದ್ದಾರೆ.
BEO ಕಚೇರಿ ಸೂಪರಿಂಟೆಂಡೆಂಟ್ ಆತ್ಮಹತ್ಯೆ
https://pragati.taskdun.com/latest/beosuperitendentshivanandsuicidemadikeri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ