Latest

ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ವಾರ್ಡನ್ ಪತಿಯಿಂದ ಕಿರುಕುಳ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಲೇಡಿಸ್ ಹಾಸ್ಟೇಲ್ ವಾರ್ಡನ್ ಪತಿಮಹಾಶಯ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಬಾಲಕಿಯರ ಹಾಸ್ಟೇಲ್ ವಾರ್ಡನ್ ನಿವೇದಿತಾ ಪತಿ ರಂಗನಾಥ್, ನೆರವಾಗಿ ಹಾಸ್ಟೇಲ್ ಗೆ ಬಂದು ವಿದ್ಯಾರ್ಥಿನಿಯರ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿನಿಯರ ಮೈ ಕೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Related Articles

ಈ ಬಗ್ಗೆ ವಾರ್ಡನ್ ಗೆ ತಿಳಿಸಿದರೆ ವಾರ್ಡನ್ ನಿವೇದಿತಾ ತನ್ನ ಪತಿಯನ್ನೇ ಬೆಂಬಲಿಸಿದ್ದಾಳೆ. ಅಲ್ಲದೇ ದೂರಿನ ಬಗ್ಗೆ ಪರಿಶೀಲನೆಗೆ ಬಂದ ಅಧಿಕಾರಿಗಳಿಗೂ ಬೆದರಿಕೆ ಹಾಕಿರುವ ರಂಗನಾಥ್, ನಮ್ಮ ಸಮಾಜದ ಮೂಲಕ ಉತ್ತರಿಸುತ್ತೇನೆ ಎಂದು ಹೆದರಿಸಿದ್ದಾನೆ.

ಹಾಸ್ಟೇಲ್ ನಲ್ಲಿ 40 ವಿದ್ಯಾರ್ಥಿನಿಯರಿದ್ದು, ಹಾಸ್ಟೇಲ್ ನಲ್ಲಿ ಸರಿಯಾಗಿ ಊಟ, ತಿಂಡಿ ಸಹ ಪೂರೈಸುತ್ತಿಲ್ಲ ಎನ್ನಲಾಗಿದೆ. ತಮಗಾಗುತ್ತಿರುವ ತೊಂದರೆ ಬಗ್ಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ.
ಭಾರಿ ಮಳೆ ಅವಾಂತರ; 32 ಜನರ ಸಾವು; 1065 ಮನೆಗಳಿಗೆ ಹಾನಿ; 5 ಜನರು ನಾಪತ್ತೆ

Home add -Advt

Related Articles

Back to top button