ಪ್ರಗತಿವಾಹಿನಿ ಸುದ್ದಿ, ಮುಂಬೈ: ಐಪಿಎಲ್ ಮಾಜಿ ಚೇರ್ಮನ್, ಉದ್ಯಮಿ ಲಲಿತ್ ಮೋದಿ ನಟಿ ಸುಷ್ಮಿತಾ ಸೇನ್ ಜೊತೆಗಿನ ತಮ್ಮ ಡೇಟಿಂಗ್ ರಹಸ್ಯ ಬಯಲುಪಡಿಸಿದ ಬೆನ್ನಲ್ಲೇ 9 ವರ್ಷದ ಹಿಂದೆ ಅವರು ಸುಷ್ಮಿತಾಗೆ ಟ್ವೀಟ್ ಮಾಡಿದ ಎಸ್ ಎಂಎಸ್ ಒಂದು ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆ ಲಲಿತ್ ಮೋದಿ ವಿವಾಹವಾಗಿದ್ದಾರೆ ಎಂಬ ಕುರಿತು ಜಾಲತಾಣಗಳಲ್ಲಿ ವ್ಯಾಪಕ ಊಹಾಪೋಹಗಳು ಹರಡಿದ್ದವು. ಆದರೆ ತಮ್ಮ ಟ್ವೀಟರ್ ಖಾತೆಯಲ್ಲಿ ಇದಕ್ಕೆ ಸ್ಪಷ್ಟನೆ ನೀಡಿರುವ ಲಲಿತ್ ಮೋದಿ, ತಾವಿನ್ನೂ ವಿವಾಹವಾಗಿಲ್ಲ. ಸದ್ಯ ನಮ್ಮ ಡೇಟಿಂಗ್ ಮಾತ್ರ ನಡೆದಿದೆ. ಅದು ಒಂದು ದಿನ ನಿಜವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಬಿಸಿಸಿಎಲ್ ಮಾಜಿ ಉಪಾಧ್ಯಕ್ಷರೊಬ್ಬರು ಲಲಿತ್ ಹಾಗೂ ಸುಷ್ಮಿತಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆ ಇವರಿಬ್ಬರ ಡೇಟಿಂಗ್ ಸುದ್ದಿ ಸದ್ಯ ರೆಕ್ಕೆ ಪುಕ್ಕ ಹಚ್ಚಿಕೊಂಡು ಜಾಲತಾಣಗಳಲ್ಲಿ ಶರವೇಗದಲ್ಲಿ ಹರಿದಾಡುತ್ತಿರುವುದಂತೂ ನಿಜ.
ವರುಣಾರ್ಭಟಕ್ಕೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ; ಶೃಂಗೇರಿ-ಆಗುಂಬೆ ಸಂಪರ್ಕ ಕಡಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ