
ಪ್ರಗತಿವಾಹಿನಿ ಸುದ್ದಿ, ಶಾಂಘೈ: ಒಂದು ವರ್ಷದ ಮಗುವೊಂದರ ಮೆದುಳಿನಲ್ಲಿ ಅವಳಿ ಭ್ರೂಣ ಪತ್ತೆಯಾಗಿದೆ.
ಚೀನಾದ ವೈದ್ಯರು ಈ “ಅಜಾತ ಅವಳಿ” ಯನ್ನು ಪತ್ತೆ ಹಚ್ಚಿದ್ದಾರೆ. ಸಾಮಾನ್ಯಕ್ಕಿಂತ ಕೊಂಚ ಹೆಚ್ಚು ವಿಸ್ತಾರ ಹೊಂದಿದ್ದ ಮಗುವಿನ ತಲೆಯನ್ನು ಪರೀಕ್ಷೆಗೊಳಪಡಿಸಿದಾಗ ಭ್ರೂಣ ಪತ್ತೆಯಾಯಿತು.
ಇವು ಪರಾವಲಂಬಿ ಅವಳಿ ಎಂದು ಕರೆಯಲ್ಪಡುತ್ತವೆ. ಅವಳಿಗಳು ಗರ್ಭಾಶಯದಲ್ಲಿ ಸಂಯೋಜಿತವಾದಾಗ ಈ ರೀತಿಯ ಬೆಳವಣಿಗೆಗಳು ಸಂಭವಿಸುತ್ತವೆ. ಅವಳಿಗಳ ಪೈಕಿ ಕೇವಲ ಒಂದು ಮಾತ್ರ ಬೆಳವಣಿಗೆಯನ್ನು ಮುಂದುವರೆಸುತ್ತದೆ ಎಂದು ತಜ್ಞ ವರದಿ ಹೇಳಿದೆ.