ಅಪರೂಪದ ಅವಳಿ ಪೊಲೀಸ್ ಅಧಿಕಾರಿಗಳು: ಎಕ್ಸ್‌ಚೇಂಜ್ ಆದರೂ ಗೊತ್ತಾಗಲ್ಲ ಎಂದ ಜನ

ಪ್ರಗತಿ ವಾಹಿನಿ ಸುದ್ದಿ ಚೆನ್ನೈ – ತಮಿಳುನಾಡಿನಲ್ಲಿ ಅಪರೂಪದ ಅವಳಿ ಐಪಿಎಸ್ ಅಧಿಕಾರಿಗಳ ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿದ್ದು ಬಗೆಬಗೆಯಲ್ಲಿ ಬಣ್ಣಿಸುತ್ತಿದ್ದಾರೆ.

ಐಪಿಎಸ್ ಅಧಿಕಾರಿ ಪಿ. ಅರವಿಂದನ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ತಮ್ಮ ಅವಳಿ ಸಹೋದರನೂ ಆಗಿರುವ ಐಪಿಎಸ್ ಅಧಿಕಾರಿ ಪಿ. ಅಭಿನಂದನ್ ಅವರ ಜೊತೆ ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೊ ಒಂದನ್ನು ಶೇರ್ ಮಾಡಿದ್ದರು. ಅದು ತಮಿಳುನಾಡು ಪೊಲೀಸ್ ಜೊತೆ ದೆಹಲಿ ಪೊಲೀಸ್ ಮೀಟ್ ಇದ್ದ ಸಂದರ್ಭದಲ್ಲಿ ತೆಗೆದ ಫೋಟೊ ಎಂದು ಅರವಿಂದನ್ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಈಗಾಗಲೇ ಬರೋಬ್ಬರಿ ೨೦ ಸಾವಿರಕ್ಕೂ ಹೆಚ್ಚು ಲೈಕ್‌ಗಳು ಕಾಮೆಂಟ್‌ಗಳು ಬಂದಿವೆ. ಹೆಚ್ಚಿನವರು ತಮಿಳುನಾಡಿನವರೇ ಕಾಮೆಂಟ್ ಮಾಡಿದ್ದಾರೆ.

ಎಕ್ಸ್‌ಚೇಂಜ್ ಆದರೂ ಗೊತ್ತಾಗಲ್ಲ ಎಂದ ಜನ

ಫೋಟೊಗೆ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, ನೀವು ಬೇರೆ ಬೇರೆ ಜಿಲ್ಲೆಯಲ್ಲಿ ಎಸ್‌ಪಿಗಳಾಗಿ ಕಾರ್ಯ ನಿರ್ವಹಿಸುತ್ತಿರಬಹುದು, ಆದರೆ ನೀವು ನಿಮ್ಮ ಜಿಲ್ಲೆಯನ್ನು ಬದಲಾಯಿಸಿಕೊಂಡರೂ ಗೊತ್ತಾಗುವುದಿಲ್ಲ ಎಂದಿದ್ದಾರೆ.

Home add -Advt

ಇನ್ನೊಬ್ಬರು, ನಿಮ್ಮಿಬ್ಬರಲ್ಲಿ ಆರು ವ್ಯತ್ಯಾಸಗಳನ್ನು ಗುರುತಿಸುವಂತೆ ಸ್ಪರ್ಧೆ ಇಟ್ಟರೆ ಸ್ಪರ್ಧಿಗಳೇ ಸೋಲುತ್ತಾರೆ ಎಂದು ಹೇಳಿದ್ದಾರೆ. ಥೆನೇಶ್ ಆನಂದ್ ಎನ್ನುಬವ ಮತ್ತೊಬ್ಬ, ತಮ್ಮ ಊರಿನಲ್ಲಿ ಇಬ್ಬರು ಅವಳಿಗಳು ಭಾರತೀಯ ಸೇನೆಯಲ್ಲಿದ್ದಿದ್ದು, ಅವರು ಬಂದಾಗ ಜನ ಕನ್ಪ್ಯೂಸ್ ಆಗುತ್ತಿದ್ದ ಅನುಭವ ಹಂಚಿಕೊಂಡಿದ್ದಾರೆ.

ಅಂದಹಾಗೆ ಅವಳಿ ಐಪಿಎಸ್ ಸಹೋದರರ ಪೈಕಿ ಅರವಿಂದನ್ ಅವರು ಚೆಂಗಲಪಟ್ಟು ಎಸ್‌ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅಭಿನಂದನ್ ಚೆನೈನ ಎಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪೈಕಿ ಅರವಿಂದನ್ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಆದರೆ ಇವರಿಬ್ಬರಲ್ಲಿ ಯಾರು ಹಿರಿಯರು ಎಂಬುದು ಅವರಿಗೆ ತಿಳಿದಿಲ್ಲವಂತೆ.

ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇಮಕಾತಿ ಪ್ರಕ್ರಿಯೆಗೆ ಚಾಲನೆ

Related Articles

Back to top button