ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಅಕೌಂಟ್ ನ್ನೇ ಲಾಕ್ ಮಾಡುವ ಮೂಲಕ ಟ್ವಿಟರ್ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದೆ.
ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಶೀತಲ ಸಮರ ಮುಂದುವರೆದಿದ್ದು, ಅಮೆರಿಕ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನು ಒಂದು ಗಂಟೆ ಲಾಕ್ ಮಾಡಿರುವ ಟ್ವಿಟರ್ ಸಂಸ್ಥೆ ಬಳಿಕ ಅನ್ ಲಾಕ್ ಮಾಡಿದೆ.
ಕೆಲ ಟಿವಿ ಚರ್ಚೆಗಳ ತುಣುಕುಗಳನ್ನು ಪೋಸ್ಟ್ ಮಾಡುವ ಮುಲಕ ಕಾಪಿರೈಟ್ ಕಾನೂನು ಉಲ್ಲಂಘನೆಯಾಗಿದೆ. ಇಂತಹ ಪೋಸ್ಟ್ ಮಾಡಿದರೆ ಕಾಪಿರೈಟ್ ಪಾಲಿಸಿ ಉಲ್ಲಂಘನೆಯಾಗಲಿದ್ದು, ಅಕೌಂಟ್ ಲಾಕ್ ಆಗಲಿದೆ ಎಂದು ಎಚ್ಚರಿಸಿದೆ
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾನೂನು ಸಚಿವರು, ತಮಗೆ ಮಾಹಿತಿ ನೀಡದೇ ಏಕಾಏಕಿ ತಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ. ನನ್ನ ಅಕೌಂಟ್ ನಾನು ಬಳಸದಂತೆ ನಿರ್ಬಂಧಿಸಿರುವುದು ಸರಿಯಲ್ಲ. ನಿರ್ಬಂಧಕ್ಕೂ ಮುನ್ನ ನನಗೆ ನೋಟೀಸ್ ನೀಡಬೇಕಿತ್ತು. ಟ್ವಿತರ್ ನ ಈ ಕ್ರಮ ಭಾರತೀಯ ಐಟಿ ರೂಲ್ 2021ರ ನಿಯಮ 4(8)ರ ಉಲ್ಲಂಘನೆಯಾಗಿದೆ. ಅಲ್ಲದೇ ಟ್ವಿಟರ್ ಮಧ್ಯವರ್ತಿ ಮಾರ್ಗಸೂಚಿ ಪಾಲಿಸಲು ನಿರಾಕರಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ