ಪ್ರಗತಿ ವಾಹಿನಿ ಸುದ್ದಿ ಲಕ್ನೋ –
ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜತೆಗೆ ಯೋಗಿ ಕ್ಯಾಬಿನೇಟ್‌ನಲ್ಲಿ ಈ ಬಾರಿಯೂ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನಿಯೋಜಿಸಲಾಗಿದೆ.
ಈ ಬಾರಿ ಕೆ. ಪಿ. ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಯೋಗಿ ಕ್ಯಾಬಿನೇಟ್‌ನ ಉಪ ಮುಖ್ಯಮಂತ್ರಿಗಳಾಗಿ ನಿಯೋಜನೆಗೊಂಡಿದ್ದಾರೆ. ಈ ಪೈಕಿ ಕೆ. ಪಿ. ಮೌರ್ಯ ಕಳೆದ ಅವಧಿಯಲ್ಲೂ ಉಪ ಮುಖ್ಯಮಂತ್ರಿಯಾಗಿದ್ದರು. ಆದರೆ ಪ್ರಸಕ್ತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೌರ್ಯ ಸೋಲು ಕಂಡಿದ್ದರು. ಆದರೆ ಅವರಿಗೆ ಈ ಬಾರಿಯೂ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಲಾಗಿದೆ. ಇನ್ನು ಕಳೆದ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ದಿನೇಶ್ ಶರ್ಮಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹಾಗಾಗಿ ಈ ಬಾರಿ ಬ್ರಾಹ್ಮಣ ಸಮಾಜದ ನಾಯಕ ಬ್ರಿಜೇಶ್ ಪಾಠಕ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಒಲಿದುಬಂದಿದೆ.
ಇವರಲ್ಲದೇ ಒಟ್ಟು ೫೨ ಸಚಿವರು ಯೋಗಿ ಬ್ರಿಗೇಡ್‌ನಲ್ಲಿ ಈ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿಜಾಬ್‌ಗೂ ಹಿಂದೂ ಸ್ವಾಮೀಜಿಗಳಿಗೂ ಏನು ಸಂಬಂಧ?; ಓಲೈಕೆಗೂ ಒಂದು ಮಿತಿಯಿದೆ ಎಂದು ಗುಡುಗಿದ ಬಿಜೆಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ