Latest

ನಾನು ಮಹಿಳೆಯನ್ನು ಮಲಗಲು ಕರೆಯುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಖ್ಯಾತ ಖಳನಾಯಕ

ಪ್ರಗತಿವಾಹಿನಿ ಸುದ್ದಿ; ಕೊಚ್ಚಿ: ವಿನಾಯಕನ್‌ ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ​ ಹೆಸರುವಾಸಿಯಾಗಿದ್ದಾರೆ. ಈಗ ಲೈಂಗಿಕತೆ ವಿಚಾರವಾಗಿ ಮತ್ತು ವಿವಾದ ಅಲೆ ಎಬ್ಬಿಸಿದ ಮಿಟೂ ವಿಚಾರವಾಗಿ ಮಾತನಾಡಿ, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಲಯಾಳಂನ ಜನಪ್ರಿಯ ನಟ ವಿನಾಯಕನ್ ಅವರು ಲೈಂಗಿಕ ಸಂಬಂಧದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ? ಮಹಿಳೆಗೆ ಲೈಂಗಿಕತೆ ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ ವಿನಾಯಕನ್ .

Home add -Advt

ವಿ.ಕೆ. ಪ್ರಕಾಶ್​ ನಿರ್ದೇಶನದ ‘ಒರುಥಿ’ ಚಿತ್ರದ ಪ್ರಚಾರದ ವೇಳೆ ವಿವಾದವನ್ನು ಸೃಷ್ಟಿ ಮಾಡಿದ್ದಾರೆ ನಟ ವಿನಾಯಕನ್. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು ‘ಮೀ ಟೂ’ ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್

Related Articles

Back to top button