CrimeKannada NewsKarnataka NewsLatest

*ಮನೆಯಲ್ಲಿ ಮಲಗಿದ್ದ ಯುವಕ ಶವವಾಗಿ ಪತ್ತೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಮಲಗಿದ್ದ ಯುವಕನ ಬರ್ಬರ ಹತ್ಯೆ ಪ್ರಕಾರಣಕ್ಕೆ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ಅನ್ಯಾಜಾತಿ ಯುವತಿಯನ್ನು ಮದುವೆಗಾಲು ಸಿದ್ಧನಾಗಿದ್ದ ಯುವಕ ಇದ್ದಕ್ಕಿದ್ದಂತೆ ಶವವಾಗಿ ಪತ್ತೆಯಾಗಿದ್ದ. ಇದೀಗ ಈ ಪ್ರಕರಣ ಹೊಸ ತಿರುವು ಪಡೆದಿದೆ.

ಮುತ್ತುರಾಜ್ ಕೊಲೆಯಾದ ಯುವಕ, ತುಮಕೂರು ತಾಲೂಕಿನ ಜಕ್ಕೇನಹಳ್ಳಿಯ ನಿವಾಸಿ. ದೇ ಗ್ರಾಮದ ಅನ್ಯಜಾತಿಯ ವಿವಾಹಿತ ಮಹಿಳೆಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದರು. ಆದರೂ ಆಕೆಯನ್ನೇ ಮದುವೆಯಾಗುವುದಾಗಿ ಮುತ್ತುರಾಜ್ ಹೇಳಿಕೊಂಡು ಓಡಾಡುತ್ತಿದ್ದ.

ಮಗನ ಈ ವರ್ತನೆಯಿಂದ ಬೇಸತ್ತ ತಾಯಿ ಮಗನಿಗೆ ಬುದ್ಧಿ ಕಲಿಸಲು ಹೋಗಿ ಆತನನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ತನಿಖೆಯಲ್ಲಿ ಬಯಲಾಗಿದೆ.

ಮಗ ಮುತ್ತುರಾಜ್ ನನ್ನು ಕೊಂದ ಆರೋಪದ ಮೇಲೆ ತಾಯಿ ಶಿವಮ್ಮಳನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಮನೆಯ ಹೊರಗೆ ಮಲಗಿದ್ದ ಮುತ್ತುರಾಜ್ ಮೇಲೆ ಹಲ್ಲೆ ಮಾಡಲು ಶಿವಮ್ಮ ನಿರ್ಧರಿಸಿದ್ದಳು. ಅದರಂತೆ, ಮನೆಯವರೆಲ್ಲರೂ ಮಲಗಿದ್ದ ವೇಳೆ ಕಬ್ಬಿಣದ ರಾಡ್ ಹಿಡಿದು ಹೊರಬಂದ ತಾಯಿ, ಮಲಗಿದ್ದ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯ ತೀವ್ರತೆಗೆ ಮುತ್ತುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮರುದಿನ ಮಗ ಮೃತಪಟ್ಟಿರುವುದು ತಿಳಿದ ಬಳಿಕ ಶಿವಮ್ಮ ಏನೂ ಗೊತ್ತಿಲ್ಲದವಳಂತೆ ವರ್ತಿಸಿದ್ದಾಳೆ. ತಾನೇ ಮೊದಲು ಮಗನ ಶವವನ್ನು ನೋಡಿದಂತೆ ಕಥೆ ಕಟ್ಟಿದ್ದಲ್ಲದೆ, ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಗೋಳಾಡಿ ಕಣ್ಣೀರಿನ ನಾಟಕವಾಡಿದ್ದಳು.

ಆದರೆ, ಪೊಲೀಸರ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳು ಕೊಲೆಯ ರಹಸ್ಯವನ್ನು ಬಯಲು ಮಾಡಿವೆ. ಕಬ್ಬಿಣದ ರಾಡ್‌ನಿಂದ ತಾಯಿಯೇ ಮಗನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಈ ಸಾಕ್ಷ್ಯಗಳ ಆಧಾರದಲ್ಲಿ ತುಮಕೂರು ಗ್ರಾಮಾಂತರ ಪೊಲೀಸರು ಶಿವಮ್ಮಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button