National

*ಒಬ್ಬನಿಗಾಗಿ ಇಬ್ಬರು ಹುಡುಗಿಯರ ಹೊಡೆದಾಟ; ತರಗತಿಯಲ್ಲಿಯೇ ಶುರುವಾಯ್ತು ಜಡೆ ಜಗಳ; ಕ್ಲಾಸ್ ರೂಂನಲ್ಲೇ ಕಿತ್ತಾಡಿಕೊಂಡ ವಿದ್ಯಾರ್ಥಿಗಳು*

ಪ್ರಗತಿವಾಹಿನಿ ಸುದ್ದಿ: ಓರ್ವ ಹುಡುಗನಿಗಾಗಿ ಇಬ್ಬರು ವಿದ್ಯಾರ್ಥಿನಿಯರ ನಡುವೆ ಅರಂಭವಾದ ಜಗಳ ಕ್ಲಾಸ್ ರೂಂ ನಲ್ಲಿಯೇ ಕಿತ್ತಡಿಕೊಳ್ಳುವ ಹಂತ ತಲುಪಿದ ಘಟನೆ ಉತ್ತರ ಪ್ರದೇಶದ ನೊಯ್ಡಾದ ಕಾಲೇಜೊಂದರಲ್ಲಿ ನಡೆದಿದೆ.

ನೊಯ್ಡಾದ ಎನ್ಐಇಟಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಅದೇ ಕಾಲಿನ ಹುಡುಗನೊಬ್ಬನನ್ನು ಪ್ರೀತಿಸಿದ್ದಾರೆ. ಹುಡುಗನಿಗಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಓರ್ವ ವಿದ್ಯಾರ್ಥಿನಿ ಇನ್ನೋರ್ವ ವಿದ್ಯಾರ್ಥಿನಿ ಮೇಲೆ ಕ್ಲಾಸ್ ರೂಂ ನಲ್ಲೇ ಹಲ್ಲೆ ನಡೆಸಿದ್ದಾಳೆ. ತರಗತಿ ಎಂಬುದನ್ನು ಮರೆತು ವಿದ್ಯಾರ್ಥಿನಿಯರಿಬ್ಬರ ನಡುವೆ ಹೊಡೆದಾಟ ಆರಂಭವಾಗಿದೆ. ಕೆಲ ಕಾಲ ಕ್ಲಾಸ್ ರೂಂ ರಣರಂಗವಾಗಿ ಮಾರ್ಪಟ್ಟಿದೆ.

ಈ ವೇಳೆ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಬ್ಬರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಕಾಲೇಜು ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿನಿಯರಿಬ್ಬರ ಹೊಡೆದಾಟ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ. ಓದುವುದನ್ನು ಬಿಟ್ಟು ತರಗತಿಗಳಲ್ಲೇ ಹೊಡೆದಾಡಿಕೊಳ್ಳುತ್ತಿರುವ ಯುವಜನತೆ ಬಗ್ಗೆ ಹಾಗೂ ಕಾಲೇಜು ಆಡಳಿತ ಮಂಡಳಿ ಮೌನವಾಗಿರುವ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button