ಪ್ರಗತಿವಾಹಿನಿ ಸುದ್ದಿ; ಮುಂಬೈ: ಸಲಿಂಗಿ ಮಹಿಳಾ ವೈದ್ಯರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರ ಮೂಲದ ಇಬ್ಬರು ಮಹಿಳೆಯರು ಇತ್ತೀಚೆಗಷ್ಟೆ ತಮ್ಮ ಸಂಬಂಧಗಳ ಬಗ್ಗೆ ಬಹಿರಂಗ ಪಡಿಸಿದ್ದರಲ್ಲದೇ ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಗೋವಾದಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.
ಡಾ.ಪರೋಮಿತಾ ಮುಖರ್ಜಿ ಹಾಗೂ ಸುರಭಿ ಮಿತ್ರಾ ಇಬ್ಬರೂ ವೃತ್ತಿಯಿಂದ ವೈದ್ಯರಾಗಿದ್ದು, ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಡಾ.ಪರೋಮಿತಾ, 2013ರಲ್ಲಿಯೇ ನನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ನನ್ನ ತಂದೆಗೆ ತಿಳಿದಿತ್ತು. ಆದರೆ ಈ ಬಗ್ಗೆ ನನ್ನ ತಾಯಿಗೆ ಇತ್ತೀಚೆಗೆ ತಿಳಿಸಿದಾಗ ಅವರು ಶಾಕ್ ಆಘಾತಗೊಂಡರು. ನಂತರದಲ್ಲಿ ನನ್ನ ಸಂತೋಷದ ಕಾರಣಕ್ಕೆ ಮದುವೆ ಒಪ್ಪಿದರು ಎಂದು ಹೇಳಿದ್ದಾರೆ.
ಆದರೆ ಸುರಭಿ ಮಿತ್ರಾ ತನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ಕುಟುಂಬದಿಂದ ಯಾವುದೇ ವಿರೋಧ ಎದುರಿಸಿಲ್ಲ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಸುರಭಿ, ಈ ವಿಚಾರವಾಗಿ ನಾನು ನನ್ನ ಪೋಷಕರಿಗೆ ತಿಳಿಸಿದಾಗ ಖುಷಿಪಟ್ಟರು. ನಾನು ಮನೋವೈದ್ಯೆ. ಹಲವರು ಈ ವಿಚಾರವಾಗಿ ತಮ್ಮ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದಾಗ ದ್ವಿ ಜಿವನ ನಡೆಸುವ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಸಲಿಂಗಿ ಜೋಡಿಯಾಗಿರುವ ಇಬ್ಬರು ಇದೀಗ ಗೋವಾದಲ್ಲಿ ವಿವಾಹವಾಗಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೋಲ್ಕತ್ತಾ ಮೂಲದ ಸುಪ್ರಿಯೊ ಚಕ್ರವರ್ತಿ ಹಾಗೂ ದೆಹಲಿ ಮೂಲದ ಅಭಯ್ ಡ್ಯಾಂಗ್ ಎಂಬ ಸಲಿಂಗಿ ಜೋಡಿ ಹೈದರಾಬಾದ್ ಹೊರವಲಯದ ರೆಸಾರ್ಟ್ ಒಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ವಂಚನೆ ಪ್ರಕರಣ; ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಮಾಜಿ ಸಚಿವರನ್ನು ಬಂಧಿಸಿದ ಪೊಲೀಸರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ