Kannada NewsKarnataka NewsLatest
*ಯುವಕರ ಗಲಾಟೆ ವೇಳೆ ಆಕಸ್ಮಿಕವಾಗಿ ವೃದ್ಧನಿಗೆ ಬಿದ್ದ ಬ್ಯಾಟ್ ಏಟು; ಅಮಾಯಕ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಯುವಕರಿಬ್ಬರ ಗಲಾಟೆ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಅಮಾಯಕ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ಅಗ್ರಹಾರ ನಿವಾಸಿ ಲಿಂಗಣ್ಣ ಮೃತರು. ವೆಂಕಟೇಶ್ ಹಾಗೂ ಆಕಾಶ್ ಎಂಬ ಯುವಕರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ವೃದ್ಧ ಲಿಂಗಣ್ಣ ಯುವಕರ ಗಲಾಟೆಯನ್ನು ರಸ್ತೆ ಬಳಿ ನಿಂತು ನೋಡುತ್ತಿದ್ದರು.
ಗಲಾಟೆ ಕೈಯಲ್ಲಿದ್ದ ಬ್ಯಾಟ್ ನಿಂದ ಹೊಡೆದುಕೊಳ್ಳುವ ಹಂತಕ್ಕೂ ತಲುಪಿದೆ. ವೆಂಕಟೇಶ್ ಎಂಬಾತ ಆಕಾಶ್ ನಿಗೆ ಜೋರಾಗಿ ಬ್ಯಾಟ್ ಬೀಸಿದ್ದಾನೆ. ತಕ್ಷಣ ಆಕಾಶ್ ಬ್ಯಾಟ್ ತಪ್ಪಿಸಿಕೊಂಡಿದ್ದಾನೆ. ಬ್ಯಾಟ್ ಬಂದು ನಿಂತಿದ್ದ ವೃದ್ಧನಿಗೆ ಬಡಿದಿದೆ. ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕಾಗಮಿಸಿದ ವಿದ್ಯಾರಣ್ಯಪುರಂ ಪೊಲೀಸರು ಯುವಕ ವೆಂಕಟೇಶ್ ನನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ