Latest

ಓಲಾ, ಉಬರ್, ರಾಪಿಡೋಗಳ ಆಟೊ ಸೇವೆ ಸ್ಥಗಿತಕ್ಕೆ ಆದೇಶ 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ  ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಬೆಂಗಳೂರಿನಲ್ಲಿ  ಅವುಗಳ ಆಟೋ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.

ಈ ಸೇವೆಗಳು ಕಾನೂನುಬಾಹಿರ ಎಂದು ಪರಿಗಣಿಸಲ್ಪಟ್ಟಿವೆ. 2 ಕಿಮೀ ಆಟೋ ಸವಾರಿಗೆ 100 ರೂ. ಶುಲ್ಕ ವಿಧಿಸುವ ಅಗ್ರಿಗೇಟರ್‌ಗಳ ವಿರುದ್ಧದ ದೂರುಗಳ ನಂತರ ಈ ಬೆಳವಣಿಗೆಯಾಗಿದೆ.

ಅಕ್ರಮ ಆಟೊರಿಕ್ಷಾ ಕಾರ್ಯಾಚರಣೆ ಕುರಿತು ಸಾರಿಗೆ ಇಲಾಖೆ ವಿವರಣೆ ಕೇಳಿದ್ದು, 3 ದಿನಗಳೊಳಗೆ ಸಲ್ಲಿಸಲು ಆದೇಶಿಸಲಾಗಿದೆ. ಒಂದೊಮ್ಮೆ ನಿಗದಿಪಡಿಸಿದ ಅವಧಿಯಲ್ಲಿ ಸಲ್ಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು,’’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಪೇಸಿಎಂ ಪೋಸ್ಟರ್ ಅಂಟಿಸುವವರೆಗೂ ಸರ್ಕಾರ ಏನು ಮಾಡ್ತಿತ್ತು? ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button