Latest

ವ್ಯಕ್ತಿ ಶಿರಚ್ಛೇದನ ಪ್ರಕರಣ; ಮತ್ತೆ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ; ಜೈಪುರ: ದ್ವೇಷದ ಭಾಷಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಧರ್ಮಗುರುಗಳು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಅಜ್ಮಿರ್ ದರ್ಗಾದ ಮುಖ್ಯ ಪ್ರವೇಶ ದ್ವಾರದಲ್ಲಿ ಜೂನ್ 17ರಂದು ಧರ್ಮಗುರುಗಳು ಮಾಡಿದ್ದ ಭಾಷಣ ಉದಯಪುರದಲ್ಲಿ ಟೈಲರ್ ಹತ್ಯೆಗೆ ಪ್ರಚೋದನೆ ನೀಡಿರಬಹುದು. ಈ ಹಿನ್ನೆಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಧರ್ಮಗುರು ಫಕರ್ ಜಮಾಲಿ, ರಿಯಾಜ್ ಹಾಗೂ ತಾಜಿಮ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಗೋಹರ್ ಚಿಸ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ.

ಉದಯ್ ಪುರ ಟೈಲರ್ ಕನ್ಹಯ್ಯ ಲಾಲ್ ನನ್ನು ಶಿರಚ್ಛೇದನ ಮಾಡಿದ ಹಂತಕರನ್ನು ಪ್ರಚೋದಿಸುವಲ್ಲಿ ಈ ನಾಲ್ವರ ಪಾತ್ರ ಪ್ರಮುಖವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಗ್ರಾಹಕರಿಗೆ ಗುಡ್ ನ್ಯೂಸ್; ಸಿಲಿಂಡರ್ ದರ ಇಳಿಕೆ

 

Related Articles

Back to top button